- ಒಂದಲ್ಲ ಒಂದು ದಿನ ಭೂಮಿಯಲ್ಲಿ ಮಣ್ಣಾಗುತ್ತೇವೆ - ಮೇ 28, 2022
ಈ ಜಗತ್ತೇ ಒಂದು ವಿಸ್ಮಯ. ಹುಟ್ಟಿದ ಪ್ರತಿಯೊಂದು ಜೀವಿಯೂ ಕೂಡ ಈ ಭೂಮಿಯಲ್ಲಿ ಒಂದಲ್ಲ ಒಂದು ದಿನ ಈ ಭೂತಾಯಿ ಮಡಿಲಲ್ಲಿ ಸೇರಲೇಬೇಕು. ಇದಂತೂ ಸತ್ಯ ಅಲ್ವಾ, ಹಾಗಂತ ಕೈಕಟ್ಟಿ ಕೂರೋಕೆ ಆಗೋದೂ ಇಲ್ಲ. ಹಾಗಾದ್ರೆ ಮದುವೆ ಮಾಡ್ಕೊಂಡು ಎರಡೆರಡು ಮಕ್ಕಳನ್ನ ಮಾಡ್ಕೊಂಡು ವಯಸ್ಸಾದ ಮೇಲೆ ಒಂದು ದಿನ ಈ ಭೂಮಿಯಲ್ಲಿ ಮಣ್ಣಾದರೆ ಬದುಕಿಗೆ ಏನ್ ಅರ್ಥ ಬಂತು? ಇಷ್ಟೇನಾ ಬದುಕು?? ಇಲ್ಲಾ.. ಅಲ್ವಾ.. ಏನೋ ಮಹತ್ವವಾದ ಕಾರಣ ಇದೆ. ಆ ಬದುಕಿಗಾಗಿ ನಮ್ಮ ಹೆಜ್ಜೆ ಬೆಳಕಿನೆಡೆಗೆ ಸಾಗಬೇಕು. ಬದುಕು ಸುಂದರವಾದ ಸೊಗಸಾದ ಜೀವ ಮತ್ತು ಜೀವನವನ್ನ ಕೊಟ್ಟಿದೆ. ಹೆತ್ತ ತಾಯಿ ಮಡಿಲಿನಿಂದ ಜೀವನ ಎಂಬ ಪ್ರಕಾಶಮಾನ ಬೆಳಕನ್ನ ದಾಟಿ ಅದೊಂದು ದಿನ ಭೂ ತಾಯಿ ಮಡಿಲು ಸೇರುವ ದಿನ ಬಂದೇ ಬರುತ್ತದೆ.


ಹಾಗಂತ ನಮ್ಮ ಜೀವನದ ವಯಸ್ಸನ್ನು ಲೆಕ್ಕ ಹಾಕುತ್ತಾ ಕೂರೋಕೆ ಸಾಧ್ಯಾನಾ!? ಆಗಲ್ಲ.. ಅಲ್ವಾ.. ನಾವು ಹುಟ್ಟಿರೋದೆ ಒಂದು ಮಹತ್ವವಾದ ಕಾರಣಕ್ಕಾಗಿ ಅಂದ ಮೇಲೆ ಆ ಗೆಲುವಿಗಾಗಿ ಈ ಕನಸಿಗಾಗಿ ನಾವು ಮುಂದೆ ಸಾಗಬೇಕು ಅಲ್ವಾ, ಈ ಹುಟ್ಟು ಸಾವಿನ ಮಧ್ಯ ನನ್ನದೇ ಆದ ಅದ್ಭುತ ಲೋಕ ಇದೆ. ಆ ಅದ್ಭುತ ಲೋಕದಲ್ಲಿ ನಾನೇ ರಾಜ ಅಥವಾ ನಾನೇ ರಾಣಿ ನನ್ನದೇ ಒಂದು ದೊಡ್ಡ ಕನಸಿದೆ. ಆ ಕನಸು ನನಸು ಮಾಡ್ಬೇಕು ಅಂದ್ರೆ ಕೆಲವೊಂದು ತೊಂದರೆಗಳು ಬರುವುದು ಸಹಜ ಅಲ್ವಾ. ಆ ತೊಂದರೆಗೆ ಭಯ ಪಡುತ್ತಾ ಕೂತರೆ ಏನೂ ಆಗಲ್ಲ ಅಲ್ವಾ.
ಒಂದು ಸಲ ಯೋಚಿಸಿ, ಹುಟ್ಟಿನಿಂದ ಸಾಯುವ ತನಕ ನಮ್ಮ ಜೀವನದಲ್ಲಿ ಹಲವಾರು ವಿಷಯಗಳು ಬಂದು ಹೋಗುತ್ತವೆ. ಅದು ಕಷ್ಟಾನೋ, ಸುಖಾನೋ ಜನರು ಲೆಕ್ಕಿಸದೆ ತಮ್ಮ ಜೀವನವನ್ನ ರೂಪಿಸಿಕೊಳ್ಳುವುದಕ್ಕಾಗಿ ಜೀವನ ನಡೆಸಿಕೊಂಡು ಹೋಗುವವರನ್ನ ತುಂಬಾ ನೋಡಿದ್ದೇವೆ. ಹಾಗಂತ ಯಾರಾದರೂ ಸುಮ್ಮನೆ ಕೂತು ಕಾಲ ಕಳೆದು ಒಂದು ದಿನ ಸಾಯುವುದನ್ನ ನೋಡಿದ್ದೀರಾ..? ಇಲ್ಲ..ಅಲ್ವಾ, ತಮ್ಮ ಹೊಟ್ಟೆಪಾಡಿಗೋಸ್ಕರ ಏನಾದ್ರೂ ಕೆಲ್ಸ ಮಾಡಿ ಅಥವಾ ಭಿಕ್ಷೆ ಬೇಡಿಯಾದರೂ ಹೊಟ್ಟೆ ತುಂಬಿಸಿಕೊಳ್ಳುವ ಹಲವಾರು ಜನರನ್ನ ನೋಡಿದ್ದೇವೆ. ಹಾಗಾದ್ರೆ ಅವರಿಗೆ ಯಾಕೆ ಭಯ ಇಲ್ಲ. ಅವರದ್ದು ಒಂದು ಜೀವನ ಇದೆ ಅಲ್ವಾ. ಅವರು ತಮ್ಮ ಜೀವನವನ್ನ ಮುಂದುವರೆಸಬೇಕು ಅಂತ ಏನೋ ಭಿಕ್ಷೆ ಬೇಡಿ ಅಥವಾ ಕೂಲಿ ಹೋಗಿ ದುಡಿದು ತಿನ್ನೋರನ್ನ ನೋಡಿದ್ರೂ ನಮಗೆ ಯಾಕೆ ಅವರ ಥರ ಭಯ ಇಲ್ದೇನೇ ನಾವು ಕೆಲ್ಸ ಮಾಡಿ ನಮ್ಮ ಜೀವನವನ್ನು ಕೂಡ ಒಂದು ಒಳ್ಳೆಯ ಹಾಗೂ ಸುಂದರವಾಗಿರುವಂತೆ ರೂಪಿಸಿಕೊಳ್ಳಬಾರದಾ ಎಂದೆನಿಸುತ್ತದೆ. ಸಾಧ್ಯ ಇದೆ ಅಂದ್ಮೇಲೆ ಆ ಜೀವನಕ್ಕೆ ನಾನು ರಾಜ ಅಥವಾ ರಾಣಿ ಯಾಕೆ ಆಗಬಾರದು. ನನ್ನಲ್ಲೂ ಆ ಧೈರ್ಯ ಆ ಶಕ್ತಿ ನನ್ನ ಮೇಲೆ ನನಗಿರುವ ನಂಬಿಕೆ ಇವೆಲ್ಲವೂ ಇದ್ದರೆ ನನ್ನ ಕನಸಿಗೆ ರಾಜ,ರಾಣಿ ಆಗೋಕೆ ಸಾಧ್ಯ.
ನನ್ನ ಜೀವನದ ಕನಸನ್ನ ನನಸು ಮಾಡಿದ್ರೆ, ಆ ಬದುಕು ನೆಮ್ಮದಿಯ ಪಯಣ ಮುಗಿಸಿದರೂ ಯಾವ ಯೋಚನೆಗಳು ಬರುವುದಿಲ್ಲ. ಹಾಗಾದ್ರೆ ನಮ್ಮ ಕನಸಿನತ್ತ ಪಯಣ ಬೆಳಸಬಹುದು ಅಲ್ವಾ? ನಮ್ಮ ಕನಸು ನನಸು ಆಗುವವರೆಗೂ ಈ ಪಯಣ ಸಾಗಬೇಕು ನನ್ನದೇ ಆದ ಹೆಜ್ಜೆಯಲ್ಲಿ; ಈ ಪಯಣ ಸಾಗುತಿರಲಿ ಹಗಲಿರುಳು.
ಹೆಚ್ಚಿನ ಬರಹಗಳಿಗಾಗಿ
דירות דיסקרטיות בקריות במיקום מרכזי And The Mel Gibson Effect
The Secret For נערות ליווי בבאר שבע למסיבות פרטיות Revealed in Seven Simple Steps
What The Pope Can Teach You About ליווי בחינם בירושלים עם תמונות אמיתיות