ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಂ.ಜಿ. ಶುಭ ಮಂಗಳ

ಲೇಖಕರಾದ ಎಂ.ಜಿ. ಶುಭಮಂಗಳ ಕೋಲಾರ ಜಿಲ್ಲೆಯ ಗುಡಿಬಂಡೆಯವರು (ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆ). ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಭಾರತೀಯ ವಿದ್ಯಾಭವನ ಕನ್ನಡ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು ಹಾಗೂ ಎಚ್.ಸಿ. ಕಿಂಚ ಸ್ಮಾರಕ ಪ್ರಶಸ್ತಿ ಪುರಸ್ಕೃತರು. ಹತ್ತು ವರ್ಷಗಳ ಕಾಲ ಉಪ-ಸಂಪಾದಕಿ, ವರದಿಗಾರ್ತಿ, ಅನುವಾದಕಿಯಾಗಿ ವಿವಿಧ ನಿಯತಕಾಲಿಕಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಸೂರ್ಯೋದಯ, ಸುಧಾ, ಕರ್ಮವೀರ, ವಿಜಯಕರ್ನಾಟಕ, ಹೊಸತು ಹಾಗೂ ಗೃಹಶೋಭಾ ಪತ್ರಿಕೆಗಳು ಹಾಗೂ ಕೆಂಡಸಂಪಿಗೆ, ಅವಧಿ, ಹಿತೈಷಿಣಿ, ಡೆಕ್ಕನ್ ನ್ಯೂಸ್ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅನುವಾದ ಇವರ ನೆಚ್ಚಿನ ಹವ್ಯಾಸವಾಗಿದ್ದು ವ್ಯಕ್ತಿತ್ವ ವಿಕಾಸ, ಪೇರೆಂಟಿಂಗ್ ಸ್ಕಿಲ್ಸ್, ಸ್ಟಡಿ ಸ್ಕಿಲ್ಸ್ ಕುರಿತ ತೆಲುಗು ಅನುವಾದಿತ ಪುಸ್ತಕಗಳು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಿಂದ ಪ್ರಕಟಣೆ ಕಂಡಿದೆ. 2018ರಲ್ಲಿ ಇಂಡಿಗೋ ಮಲ್ಟಿಮೀಡಿಯಾ ಪ್ರಕಟಣಾ ಸಂಸ್ಥೆ ಸ್ಥಾಪಿಸಿ ಜನಪ್ರಿಯ ವಿಜ್ಞಾನ ಸೇರಿದಂತೆ ಹಲವಾರು ಉತ್ತಮ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

“ರಾಮಜನ್ಮ ಭೂಮಿ-ಬಾಬ್ರಿ ಮಸೀದಿ” ವಿಷಯ ಹೇಗೆ ಹೇಳಬೇಕೋ ಯೋಚಿಸುತ್ತಿದ್ದಾನೆ ರವೀಂದ್ರ. ಈ ವಿಷಯದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಅಭಿಪ್ರಾಯ. ಯಾರು…