ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗುರು

ಬದುಕೆಂದರೇನೆಂದು ಹುಡುಕುವ ಹೊತ್ತಿಗೆ ಮುಕ್ಕಾಲು ಉರಿದ ಊದುಬತ್ತಿ ಸುತ್ತ ಪರಿಮಳ ಉಸಿರಿಗೂ ಚೌಕಾಸಿ...
ಎಸ್ ನಾಗಶ್ರೀ
ಇತ್ತೀಚಿನ ಬರಹಗಳು: ಎಸ್ ನಾಗಶ್ರೀ (ಎಲ್ಲವನ್ನು ಓದಿ)

ಗುರುವೆಂದರೆ ತಾಯಿ
ಅಕ್ಕರ ಕಲಿಸಿದ ಬಂಧು
ಗೆಳತಿ, ಗೆಳೆಯ
ಮೊನ್ನೆ ಹುಟ್ಟಿದ ಮಗು
ಅಕ್ಷರದ ಚೌಕಟ್ಟಿನಾಚೆಯ ಶ್ರಮಿಕ
ಅನಾಮಿಕ ಪತ್ರ
ಕಷ್ಟ
ಹಣೆಬರಹ
ಏನೇನೋ ಅನ್ನಿಸುತ್ತಾ ಹೋಗಿ
ಗುರುವೆಂದರೆ ಬೆಳಕು
ಗುರು ಬದುಕು
ತಿಳಿಯಾಗಿ ತಿಳಿಯುವ ಹೊತ್ತಿಗೆ
ದೇಹಕ್ಕೆ ಮುವ್ವತ್ತು

ಗುರು ಯಾರೆಂದು ಕಲಿಸುವ
ಪಠ್ಯ
ಉರುಹೊಡೆದ ಉತ್ತರದಂತೆ
ಮಧ್ಯೆ ಗಿರಕಿ
ಹೃದ್ಗತವಾದ ಸಮಯ
ಗುರು ದೂರದ ನಕ್ಷತ್ರವಲ್ಲ
ನಮ್ಮೊಳಗಿನ ಅಂತಃಸಾಕ್ಷಿ

ಬದುಕೆಂದರೇನೆಂದು ಹುಡುಕುವ
ಹೊತ್ತಿಗೆ
ಮುಕ್ಕಾಲು ಉರಿದ ಊದುಬತ್ತಿ
ಸುತ್ತ ಪರಿಮಳ
ಉಸಿರಿಗೂ ಚೌಕಾಸಿ

ಓಡುವ ಗಾಡಿಯ ಹಿಡಿಯುವ
ಕಲೆ
ಕಲಿಸಿ ಬರುವಂತದ್ದಲ್ಲ
ಯಾರು ಮುಂದೆ?
ಯಾರು ಹಿಂದೆ?
ನಡೆದು ಸಾಗುವ ಸುಖ
ಹೇಳಿಕೊಡುವುದು ಬದುಕು
ಸದ್ಯಕ್ಕೆ ಸಾವಧಾನ ಸೂತ್ರ

ಬದುಕೆಂದರೇನೆಂದು ಹುಡುಕುವ
ಹೊತ್ತಿಗೆ
ಮುಕ್ಕಾಲು ಉರಿದ ಊದುಬತ್ತಿ
ಸುತ್ತ ಪರಿಮಳ
ಉಸಿರಿಗೂ ಚೌಕಾಸಿ

ಎಸ್. ನಾಗಶ್ರೀ ಅವರ ಕವಿತೆಯಿಂದ