ಇತ್ತೀಚಿನ ಬರಹಗಳು: ನಾ ದಿವಾಕರ (ಎಲ್ಲವನ್ನು ಓದಿ)
- ಸಮಾಜವಾದಿ ತತ್ವ ಸಿದ್ದಾಂತ ಮತ್ತು ಅಧಿಕಾರ - ಜನವರಿ 29, 2025
- ಭಾರತದಲ್ಲಿ ಕಳೆದುಹೋಗುತ್ತಿರುವ ವೈಜ್ಞಾನಿಕ ಪ್ರಜ್ಞೆ - ಸೆಪ್ಟೆಂಬರ್ 3, 2022
- ನವ ಭಾರತ ಹಿಂಸೆಯ ತಾಣವಾಗುತ್ತಿದೆಯೇ ? - ಮೇ 1, 2022
ಜೀವ ಭಾವದ ನಡುವೆ
ಎನಿತು ಅಂತರ
ಎದೆಯ ಭಾಷೆಯ ಸಿಕ್ಕು
ಮನದ ಮಾತುಗಳ ಬಿಕ್ಕು
ಒಡಲ ನೆಲೆಗಳಲವಿತು
ದಿಕ್ಕುಗಳೆಣಿಸುವಾಗ
ಚಿತ್ತ ಚಿತ್ತಾರದ ರಂಗು
ಕಣ್ಣೆವೆಗಳ ಬಿಂಬದಲಿ ;
ತುಳಿದ ಹಾದಿಯ ನೋವು
ಸವೆದ ಘಳಿಗೆಗಳ ಬೇವು
ಏರುದನಿಗಳಲೆಗಳಲಿ
ತಳಸೇರಿದ ಚೀತ್ಕಾರ
ಶಿಥಿಲ ಸೇತುಗಳ ದಾಟಿ
ಹರಿಗೋಲನರಸುವ ತವಕ
ತೆರೆಯಂಚಿನ ಗೂಡಿನಲಿ
ಮರಿ ಹಕ್ಕಿಯ ಪುಳಕ ;
ಮೌನ ವೃಕ್ಷದ ಎಲೆಗೆ
ಬೀಸುಗಾಳಿಯ ಬಯಕೆ
ಬೇರಲಡಗಿದ ಸದ್ದು
ಒಡಲಾಳದಲಿ ಲೀನ
ನೆಲದ ಮೇಲಿನ ಇಬ್ಬನಿಗೆ
ಹಸಿರ ಹೊದಿಕೆಯ ಆಸೆ
ಮುರಿದ ಬಳ್ಳಿಯ ನೊಸಲು
ತರಗೆಲೆಗಳ ಪಾಲು ;
ಪೊರೆದ ಸೂರಿನ ನೆರಳು
ಮರಳುಗಾಡಿನ ಕಂಪು
ಮಿಡಿದ ಹೆಜ್ಜೆಗಳ ನಾದ
ಸವೆದ ಪಾದಗಳ ಬಿರುಕು
ಅಟ್ಟ ಸೇರಿದ ಜೋಲಿ
ಉಟ್ಟ ಅರಿವೆಯ ಹೊಳಪು
ಸುಟ್ಟ ಕರುಳಿನ ಮಾತು
ಮಸಣ ಮೌನಕೆ ಶರಣು !
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು