ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬದಲಾಗಲಿ ಏಕೆ?

ಅರೆಬೆಂದ ಕನಸುಗಳು ಮುಲುಗುತ್ತಿವೆ...! ಎಂಬ ಶಬ್ದಗಳ ಪ್ರಯೋಗದೊಂದಿಗೆ ಕನ್ನಡದ ಸಾಲುಗಳನ್ನು ಜೋಡಿಸಿ ಕವಿತೆಯನ್ನು ಅನುವಾದಿಸಿ ಬರೆದಿದ್ದು ಲೇಖಕಿ ಮಂಜುವಾಣಿ ಅವರು..
ಮಂಜುವಾಣಿ ಎಸ್. ಡಿ.
ಇತ್ತೀಚಿನ ಬರಹಗಳು: ಮಂಜುವಾಣಿ ಎಸ್. ಡಿ. (ಎಲ್ಲವನ್ನು ಓದಿ)

ಬದಲಾದ ಕಾಲದೊಂದಿಗೆ ಸಾಗುವುದು ಹೇಗೆ..
ತನ್ನತನವನು ತೊರೆದು ನಾನಾಗಲಿ ಹೇಗೆ..
ಎದುರಿನವರ ನೋಟದಲಿ ಮೇಲೇರುವುದಕ್ಕಾಗಿ
ನನ್ನದೇ ದೃಷ್ಟಿಯಲಿ ನಾನು ಬೀಳಲಿ ಹೇಗೆ..
ಕಷ್ಟಪಟ್ಟು ಪಡೆದಿರುವೆ ಕಳೆದು ಹೋಗಿದ್ದ ನನ್ನನ್ನು
ಅಂಥ ಅಸ್ಥಿತ್ವವನ್ನು ನಾನೀಗ ಅಳಿಸಲಿ ಹೇಗೆ..
ಅರೆಬೆಂದ ಕನಸುಗಳು ಮುಲುಗುತ್ತಿವೆ ಮನದಲ್ಲಿ
ಅವುಗಳನು ನನಸಾಗಿಸದೆ ಹೊಸಕಿ ಹಾಕಲಿ ಹೇಗೆ?
ಉಸಿರಾಡುವುದನ್ನೂ ಮರೆತಿದ್ದವಳು ನಾನು
ಇತ್ತೀಚೆಗೆ ಬದುಕುವುದ ಕಲಿತೆ ಈಗ ಸಾಯಲಿ ಹೇಗೆ..?
ಇನ್ನಾರದೋ ಮೇಲಲ್ಲ ನನಗೆ ನನ್ನ ಮೇಲೆ ಪ್ರೀತಿ
ಜಗತ್ತಿನ ರೀತಿ-ನೀತಿಗಾಗಿ ನಾನು ಬದಲಾಗಲಿ ಏಕೆ?