- ಸಂತೆಯಲ್ಲಿ.. - ಅಕ್ಟೋಬರ್ 18, 2020
ಸಂತೆಯಲಿ
ಕೆಲವರು ಕೊಳ್ಳಲು ಬರುತ್ತಾರೆ
ಕೆಲವರು ನೋಡಲು ಕೊಳ್ಳುತ್ತಾರೆ
ಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲ
ಅಂಗಾಂಗಗಳ ಮಾತು ಖುಲ್ಲ
ಮಹಿಳೆಯರು
ಮಳೆಯಮಾತಿನ
ಹೊಸ ಚರ್ಯೆ ಚರ್ಚೆ ಸ್ವಪಾಕ
ಸುಕ್ಕುಗಳ ಅಡಗಿಸಿ ಮನೆಯಲಿ ಸ್ವಪಾತ್ರ
ಗಂಡನ ಚಮತ್ಕಾರ ನೂಡಲ್ ನಂತಹ
ಪರಿಹಾರ
ಗರತಿಯರನ್ನು ತರಗತಿಗೆ ಕಳುಹಿಸಿ
ಪಿಸುಮಾತಿನಲ್ಲಿ ದ್ವಿಪಾತ್ರ
ಹೌಹಾರಿಸಿದ ಚಿತ್ರ
ಪುರುಷರು
ಸಂತೆಯಲ್ಲಿ
ಹೆಂಡತಿ,ಬಡ್ತಿ,ಲೋನು
ಅನುಕಂಪಕ್ಕೆ ಕಾಯುವ
ಶೋಷಿತರು ಪೆಗ್ ನಲ್ಲಿ
ಮೀಟೂ ಕಥಾಸರಣಿ
ಯುವಕರು
ಸಂಜೆ ಸಂತೆಯಲಿ ಸಂದವರು, ಪ್ರೀತಿಯಲಿ ದುಶ್ಯಂತರು
ಮಾತು ಬೇಡದ ಬರೀ ಸೂಚನೆ
ವಿವರಣೆ, ಹಕ್ಕಿಯಂತೆ ಹಾರಿ ಮಾತು ಮತ್ತೇನೋ ಆದ ಬವಣೆ
ಕೇಳದ ಕಿವಿಗೆ ಹೇಳದ ಬಾಯಿ ನೋಡದ ಕಣ್ಣು
ಮಾರುವವರ ಎದೆಯಿಂದ ಕೊಳ್ಳುವವರ ಕಣ್ಣ ಹೊರಗೆ
ಯಾರದೋ ಹೊಂಡಕ್ಕೆ ಯಾರದೋ ಮಣ್ಣು
ಕೀ (ಎಲ್ಲಿದೆ ಹುಡುಕಿ)ಇಲ್ಲದೆ ಮರೆತ ಬಾವುಟ
ಹಾರುತ ಪಟಪಟ
ಕವಿಗಳು
ಸಂತೆಯಲಿ ಸಿಗುವುದು ಕವಿತೆಗೆ ಬದಲಾದ ರೂಪ,
ಅನುಭವ ಕಾಡದು ಬರೆ ಅಳಲಿನ ಸ್ವಗತ ರೂಪ?
ಅವೇ ಕವಿತೆಗಳು ಪುರವಣಿಗೆಗಳಲಿ ತದ್ರೂಪ
ಮಾತಿನಲ್ಲಿ ವಿಮರ್ಶೆ ಯಾಕೋ ಮೌನ ಕವಿಗೆ
ಕವಿಗೋಷ್ಟಿಯಲಿ ಕವಿಗಳು ಮಂಚದಲಿ ಕುಂತರು
ಸಂತೆಯಲಿ ಓದಿದ ಕವಿತೆಗಳುಹಾರಿಹೋದವು
ಗಂಗೆಯ ಎಂಟನೇ ಮಗುವಿನಂತೆ
ವಾಟ್ಸಾಪ್ ಕವಿಗಳ ಗುಂಪನ್ನು ಅರಸಿ
ಒದದೇ ಕವಿತೆ ಹೇಳಿದ ಕವಿ ಸಮ ಬಾವನೆ ಪಡೆದರು
ಸಂತೆ ಅಮೂರ್ತ ನಿಂತಂತೆ
ಸಂಜಯನ ಕಣ್ಣಂತೆ
*-*
ಚಿತ್ರಕೃಪೆ-Dominique Amendola Fine Art
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ