- ಬೇಸರವ ಕಡಿಮೆ ಮಾಡುವ ಮಲಾಮು… - ಮಾರ್ಚ್ 13, 2023
- ಕೆಟ್ಟ ಚಟವೇತಕೆ? - ಜೂನ್ 20, 2022
- ಭರವಸೆಯ ದಾರಿ… - ಆಗಸ್ಟ್ 24, 2021
ನಾ ಭೂಮಿಗೆ ಬಂದಾಗಿನಿಂದಲೂ
ನನ್ನ ಎತ್ತಾಡಿಸಿದವಳು ನನ್ನಜ್ಜಿ
ನನ್ನ ಬಾಲ್ಯದ
ಆಟ, ಓಟದ ವೈಖರಿಯ
ನನ್ನದುರೆ ಸಿನಿಮಾ ಕಥೆಯಂತೆ
ತೆರೆದಿಡುತಿದ್ದವಳು ನನ್ನಜ್ಜಿ
ಕೆಲವೊಮ್ಮೆ ಆಕೆಯಾಡುವ ಮಾತುಗಳು
ವೇದಾಂತದಂತೆಯೆ ಕೇಳಿಸುತಿದ್ದುದ್ದುಂಟು
ಈ ನನ್ನಯ ಕಿವಿಗಳಿಗೆ..
ಮಗದೊಮ್ಮೆ ಅಭಿಮಾನಿಯಾಗಿ
ಸೋತುಬಿಡುತಿದ್ದೆ ನಾ
ಯಾರನ್ನು ದೂಷಿಸದ
ಆಕೆಯ ನಿಷ್ಕಲ್ಮಶ ಗುಣಗಳಿಗೆ…
ಪ್ರತಿ ಬಾರಿ ಮನೆಯಿಂದ
ಹೊರಟು ನಿಂತಾಗಲೂ
ಬಾಗಿಲಲ್ಲಿಯೇ ಕುಳಿತು
ಮರೆಯಲ್ಲಿಯೆ ಅಳುತಿದ್ದ
ಮಗುವಿನಂತ ಮನಸು ಅವಳದು
ಆದರೆ ಮುಂಜಾನೆಯ ಕರೆಯೊಂದು
ಆಕೆ ನಮ್ಮನ್ನೆಲ್ಲ ಅಗಲಿದ
ವಿಷಯವ ಹೇಳುತ್ತಿದೆ
ಅಗಲಿಸಿ ಕೇಳಿಸಿಕೊಂಡ ಕಿವಿಗಳು ಕೂಡ
ತಮ್ಮ ಕೇಳುವಿಕೆಯನ್ನೆ
ಸಂಶಯಿಸಿ ಪ್ರಶ್ನಿಸಿಕೊಳ್ಳುತ್ತಿವೆ…
ಎಂದಿಗಿಂತ ಇಂದು ಭಾರವಾದ
ಹೃದಯದ ಪರದೆಯ ಮೇಲೆ
ನೆನಪಿನ ಸುರಿಮಳೆ
ಧಾರಾಕಾರವಾಗಿ ಸುರಿಯುತಿದೆ
ತಿಂಗಳುಗಳ ಹಿಂದೆಯಷ್ಟೆ
ಮುದ್ದುಮಾಡಿ ಕಳುಹಿಸಿದ
ನನ್ನಜ್ಜಿ ಜೊತೆಗಿಲ್ಲವೆಂಬುದ
ಅರಗಿಸಿಕೊಳ್ಳಲಾಗದೆ ಮನಸು
ಮರುಗುತ್ತಿದೆ
ಬಿಕ್ಕಳಿಸಿ ಅಳುತಿದ್ದೇನೆ ನಾನು
ಸುತ್ತಲಿನ ನಾಲ್ಕು ಗೋಡೆಯ
ಮಧ್ಯೆ ಕೂತು
ಕೊನೆಯದಾಗಿ ನಿನ್ನ ಮುಖವ ನೋಡಲಿಕ್ಕಾಗದಿದ್ದಕ್ಕೆ..
ಶಪಿಸುತಿದ್ದೇನೆ ಈ ಮಹಾಮಾರಿ
ಎಂಬ ಕೊರೊನಾವ
ನಿನ್ನ ನೋಡಲು ಬಿಡದೆಯೆ
ನನ್ನ ಬೇರೊಂದು ರಾಜ್ಯದಲ್ಲಿ
ಬಂಧಿಸಿರುವುದಕ್ಕೆ
ಕೊನೆಯದಾಗಿ
ನಿನ್ನ ನೋಡಲಾಗದಿದ್ದರೂ
ನೀ ಕೊಟ್ಟ ಕೊನೆಯಾಗದಷ್ಟು
ನೆನಪುಗಳ ರಾಶಿ
ಇಂದು ನನ್ನ ಜೊತೆಯಲ್ಲಿದೆ..
ಜೊತೆಯಾದವುಗಳು
ಕೊನೆವರೆಗೂ ನನ್ನೊಡನೆಯೇ
ಜೀವಂತವಾಗಿರುತ್ತವೆ ಕೂಡ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ