ಇತ್ತೀಚಿನ ಬರಹಗಳು: ಸುಜಾತಾ ರವೀಶ್ (ಎಲ್ಲವನ್ನು ಓದಿ)
- ಅಪ್ಪನೇ ಬದುಕಿನ ಹೀರೋ! - ಜೂನ್ 19, 2022
- ಅಸ್ಮಿತೆಯ ಹಣತೆ - ಆಗಸ್ಟ್ 15, 2021
ಇತಿಹಾಸದುದ್ದಕ್ಕೂ ಆಗಿರುವುದು ಅಮರ
ಸ್ವಾಭಿಮಾನ ದೇಶಭಕ್ತಿಗಾಗಿ ನಡೆದು ಸಮರ
ಅಂದಿಗೂ ಇಂದಿಗೂ ಎಂದಿಗೂ ಅಜರಾಮರ
ಅಸ್ಮಿತೆ ಉಳಿಸಿಕೊಳ್ಳುವ ನಮ್ಮಯ ಹೋರಾಟದ ಸಾರ
ಪರಕೀಯರ ಆಕ್ರಮಣದೆದುರಲಿ ವೀರತೆ
ನಮ್ಮತನದ ಗೆಲುವಿಗಾಗಿ ಮೆರೆವ ಘನತೆ
ಉರಿಸುತ್ತಲೇ ಇದ್ದೇವೆ ಅಭಿಮಾನದ ಹಣತೆ
ಸ್ವಾತಂತ್ರ್ಯದ ಉಳಿವಿಗಾಗಿ ಸತತ ಕ್ಷಮತೆ
ಸ್ವರಾಜ್ಯ ಪಡೆದಾಗಿನ ನಮ್ಮ ನಿಜ ಗೆಲುವು
ಪ್ರಜಾಪ್ರಭುತ್ವದ ದಾರಿಯಲ್ಲಿನ ಪಯಣವು
ಸುಗಮವೆನಿಸಿರೆ ಕಾರಣ ನಮ್ಮ ಸ್ವಾಭಿಮಾನ
ಪ್ರಜ್ವಲಿಸಿ ಬೆಳಗುತ್ತಲಿರುವೀ ದೇಶಾಭಿಮಾನ
ಭವ್ಯ ಸಂಸ್ಕೃತಿ ಪರಂಪರೆಗಳ ನಮ್ಮ ನಾಡು
ಶೌರ್ಯ ಸಾಕಾರವಾದ ರಾಷ್ಟ್ರಪ್ರೇಮದ ಬೀಡು
ಜಾತಿಧರ್ಮ ಪಂಥಗಳು ಭಿನ್ನವಿದ್ದರೂ ಪರಸ್ಪರ
ತಾಯಿ ಭಾರತಿಯ ಆರಾಧನೆಯಿದು ನಿರಂತರ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ