ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆ ಕಂಗಳು…

ಶಿವಪ್ರಸಾದ ಮಂಡಿ
ಇತ್ತೀಚಿನ ಬರಹಗಳು: ಶಿವಪ್ರಸಾದ ಮಂಡಿ (ಎಲ್ಲವನ್ನು ಓದಿ)

ಎನಿತು ಮಾಯೆಯಡಗಿದೆ ಈ ಕಂಗಳಲಿ
ಅಮಲೇರದ ಬೃಹತ್ ಕಾಯಕೆ
ಮದವೇರಿಪ ಮತ್ತನೇರಿಸಿ
ಕ್ಷಣ ಮೂಕವಿಸ್ಮಿತನನ್ನಾಗಿಸಿದೆ..

ಅರಳದ ಬಯಕೆಗಳನುದಿಸಿ
ವಿರಹದಾ ಬೇಗೆಯಲಿ ಬೇಯಿಸಿ
ಹೃದಯದಿ ಚಿತ್ತಾರವನು ಬಿಡಿಸಿ
ಅನುಗಾಲ ನೆನಪಿಸುತಿದೆ ನಿತ್ಯ ಸ್ಮರಿಸಿ…

ಆಸೆಗಳ ಕಟ್ಟೆಯನೊಡೆದು
ಬಯಕೆಗಳ ಶಿಖರದಾ ಬೆಂಬಿಡಿದು
ಮನದಿ ಹೊಸ ಆಶಯವಾ ಪಿಡಿದು
ನಿವೇದಿಸುತಿದೆ ಪರಿ-ಪರಿಯಾಗಿ ಸವಿದು….

ಮಾದಕತೆಯಾ ಈ ನಯನದಲಿ
ಕಳ್ನೋಟದ ಸವಿ-ಸಲ್ಲಾಪದಲಿ
ಕೋಲ್ಮಿಂಚಿನಾ ಕಣ್ಣೋಟದಲಿ
ಉಸಿರ ಮೇಳೈಸಿದೆ ಸುಮ ಪ್ರೀತಿಯಲಿ…..

ಬಯಕೆಗಳು ತೇಲುತಿಹ ನಯನವು
ಹೊಮ್ಮಿಸಲಿ ಪ್ರೇಮಾತೀತ ಧಾರೆಯನು
ಸೃಷ್ಠಿಸಲಿ ನವ ಪ್ರೇಮ-ಕಾಮನೆಗಳನು
ಉಸಿರ ಉಸಿರಿಗೆ ತಾಕಿಸುತಲಿನ್ನು….

– ‘ರಘುವೀರ (ರನ್ನ)’