- ಪ್ರಕೃತಿ - ಅಕ್ಟೋಬರ್ 11, 2022
- ತ್ರಿಶಂಕು - ಆಗಸ್ಟ್ 21, 2022
- ಬಿಟ್ಟು ಬಂದ ಊರು - ಮೇ 28, 2022
ಈಗೀಗ
ಹೃದಯತುಂಬಿ
ಬರಮಾಡಿಕೊಳ್ಳುವುದು
ಅಸಹಜವಾಗಿದೆ!
ನಿನ್ನನ್ನೇ ಹುಡುಕಿಕೊಂಡು ಬಂದರೆ
ಅರಮನೆಯಂಥ ನಿನ್ನ
ಮನೆ ಸ್ವಾಗತಿಸುತ್ತದೆ.
ಮನೆಯೊಳಿರುವ
ಟೀವಿ,ಫ್ರಿಜ್, ಸೋಫಾ ಸೆಟ್,
ಪರದೆ, ಕಾಲುಹಾಸು, ಏಸಿ,
ಕಂಪ್ಯೂಟರ್,ವಾಷಿಂಗ್ ಮೆಶೀನ್,
ಕಾರು,ಸಾಕುನಾಯಿ
ನೋಡಿ ನಕ್ಕಂತಾಗುತ್ತದೆ.
ಭಾವನೆಗಳನ್ನು
ಬಿಂಬಿಸಬೇಕಾದ
ಮುಖಪರದೆಗೆ
ಗರಬಡಿದು
ಬ್ಲರ್ ಆಗಿ
ಕಾಣುತ್ತದೆ.
ನೋವು, ನಲಿವು,
ಕಾಮ, ಕ್ರೋಧ,
ಆಶ್ಚರ್ಯ, ಆತಂಕ,
ದ್ವೇಷ, ಅಸೂಯೆ,
ಪ್ರೇಮ, ವ್ಯಾಮೋಹ-
ಎಲ್ಲವನ್ನೂ
ಇಮೋಜಿಗಳಲ್ಲೇ
ಅಮೋಘವಾಗಿ
ಕಾಣಿಸುತ್ತೀಯ!
ಪ್ರೇಮವನ್ನೂ ಕಾಮವನ್ನೂ
ಇಮೋಜಿಗಳಿಗೇ ಬಿಟ್ಟು
ಭಾವಪ್ರಾಪ್ತಿ ಹೊಂದುವಂತಿದ್ದರೆ!
ವ್ಯಾಟ್ಸಾಪಿನಲ್ಲಿ ಚಾಟಿಸುವಾಗಿನ
ಆತ್ಮೀಯತೆ
ಎದುರಿಗೆ ಬಂದಾಗ
ಆಗುಂತಕನಾಗುತ್ತದೆ.
ಮುಖಪುಟದ ಸ್ನೇಹಕ್ಕೆ
ಯಾರ ಸಾವು
ಸೂತಕ ತರುತ್ತದೆ?
ಪ್ಲಾಸ್ಟಿಕಿನ ಹೂಬಳ್ಳಿಗಳ
ತೋರಣ ಮಾಡಿ
ಸುವಾಸನೆಯಲ್ಲಿ ತೇಲುವಂತೆ
ಸುಹಾಸವ ಬೀರುತ್ತೀಯ.
ಬರೀ ಹೂಬಳ್ಳಿಗಳೇ ಅಲ್ಲ,
ಸೆಕ್ಸ್ ಟಾಯ್ಗಳನು ಬಳಸಿ
ಪರಾಕಾಷ್ಠೆ ತಲುಪಬಹುದಲ್ಲ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ