- ತೂತುಗಳ ತಲೆಮಾರು - ನವೆಂಬರ್ 26, 2020
- ಜೇಡ ಮತ್ತು ಅವನು - ಆಗಸ್ಟ್ 2, 2020
- ಉಸಿರೇ ಓ ಉಸಿರೆ - ಜುಲೈ 23, 2020
ಕುಗ್ಗಿ ಹಿಗ್ಗುತಿರಲು ಸ್ನಾಯು
ಕೆ.ಆರ್.ಎಸ್.ಮೂರ್ತಿ ಅವರ ಕವಿತೆಯಿಂದ…
ಮಿಡಿದ ಕೋಶವಿಡದೆ ಆಯು?
ಶ್ರಮ ಸತತಕೆ ಸಂಕುಚನ
ಮಹಾಧ್ಯಾನ ಆಕುಂಚನ!
ಸಕಲ ಮಹತ್ವ ನಿನ್ನದಾಗೆ
ಇದೊ ವಂದನೆ… ಉಸಿರೆ!
ಹಸಿಯುಸಿರೆ? ಬಿಸಿಯುಸಿರೆ?
ಸೊಕ್ಕುಸಿರೆ? ಬಿಕ್ಕುಸಿರೆ?
ಏದುಸಿರೆ?… ನಿಟ್ಟುಸಿರೆ?
ಎಲ್ಲಿ ಬದುಕು?… ನಿಂತರೆ!
ಜೀವ ಜೀವಾಳದಂತೆ
ಉಚ್ಛ್ವಾಸ ನಿಶ್ವಾಸ ಮಮತೆ
ಮೆರೆದಿದೆ ಈ ಜೀವನ
ಆಗಲಿಹುದೆ ಪಾವನ?
ಕುಗ್ಗಿ ಹಿಗ್ಗುತಿರಲು ಸ್ನಾಯು
ಮಿಡಿದ ಕೋಶವಿಡದೆ ಆಯು?
ಶ್ರಮ ಸತತಕೆ ಸಂಕುಚನ
ಮಹಾಧ್ಯಾನ ಆಕುಂಚನ!
ಉಸುರಿನೊಳಗದೇನು ಲಾಸ್ಯ
ನಗುವು ಅಳುವು ತಿಳಿಯ ಹಾಸ್ಯ
ಮನ ಬೆಳಗಿದೆ ನಿತ್ಯ ನಿತ್ಯ
ಇಹದ ಚೆಲುವನಿಡಲು ಸ್ವಾಸ್ಥ್ಯ
ಅನಿಲ ಆಮ್ಲಜನಕ ವರವು
ಬನ-ಕಾನನ ಪೊರೆವ ಸೊಗವು
ಕೊಡುತ ಜೀವ, ಕಾಯಕೆ
ಮಾಡಲೇನು? ಋಣ ಮುಕುತಿಗೆ
ತೀರಬೇಕು ಇರದೆ ಸೊಲ್ಲು
ಉಸಿರುಸಿರಿನ ಋಣದ ಪಾಲು
ಮರದ ಕೆಡವು ತಡೆಯಲೆ?
ಮರವನೆರಡು ಬೆಳೆಸಲೆ?
ಹನಿ ಹನಿಯಲಿ ನೀರ ಹಳ್ಳ
ತೆನೆ ತೆನೆಯಲಿ ಕಾಳು ಬಳ್ಳ
ಋಣ ತೀರಲಿ ಪಾತ್ರಕೆ
ಘನತೆಯ ಕಿರು ಅರಿವಿಗೆ!
ಇದೊ ವಂದನೆ ಉಸಿರೆ
ಚಿರಋಣಿ ನಾ ಹಸಿರೆ
ಇದೊ ವಂದನೆ ಹಸಿರೆ
ಚಿರಋಣಿ ನಾ ಉಸಿರೆ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ