ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವ ಮೂಲ ಎಲ್ಲಿ?

ನಳಿನ ಡಿ
ಇತ್ತೀಚಿನ ಬರಹಗಳು: ನಳಿನ ಡಿ (ಎಲ್ಲವನ್ನು ಓದಿ)

ಒಲವೇ ನಿನ್ನ ಮೂಲ ಹುಡುಕುತಿರುವೆ,
ಜಲಮೂಲ, ಋಷಿ ಮೂಲ, ಹೆಣ್ ಮೂಲ ಅಲ್ಲಿರಲಿ,
ನಿನ್ನ ನಾಮ ಜಪಿವ ಎಲ್ಲಾ ಪಾಪಾತ್ಮರಿಗೂ ದಕ್ಕುವ,
ಸಿಕ್ಕುವ,
ಪರಮಾತುಮನೊಬ್ಬನು ನೀನೇ,
ಒಲವೇ, ನಿನ್ನ ಮೂಲ ಯಾವುದು?

ಉರಿಗೆಂಡವಾಗಿ ಉರಿದುರಿದು,
ಕೊಡವಿ ಬೂದಿಯ ಮತ್ತೆ,
ಹೊರಬರುತಿರುವೆ,
ಹೊಗೆಕೊಳವೆಯಿಂದ…

ಸುತ್ತ ಸತ್ತರೆಂದು ಜಪಿವರ,
ಅಡ್ಡಗಟ್ಟಿ ಜಪ್ಪಿಸಿ ಹಿಡಿದವರ,
ತಪ್ಪಿಸಿ ನೆಗೆದು ನೆಟ್ಟಗೆ ನಿನ್ನ ಬೆರಳ ಹಿಡಿದಿರುವೆ,
ಒಲವೇ ನಿನ್ನ ನೆಲಮೂಲದ
ಹೂಗೊಂಚಲು‌,
ನೆಟ್ಟಿರುವೆ ಏಕಿಲ್ಲೂ?

ಪರಮ ಪಾಪಿಗಳ ಕೂಪದಿ,
ಒದ್ದು ಹೊರಬಿದ್ದಿರುವೆ,
ಅಂತರಾತುಮದಿ ಅಂಥ ಪಾಪದ ಸುಳಿವಿಲ್ಲ,
ಸೀಳಿದ ಹೊಗೆಗೂಡಿಗೆ ನೀ ಬಂದೆ ಹೇಗೆ?