ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕತ್ತಲೊಳಗಿನ ಬೆಳಕು

ರೇಶ್ಮಾ ಗುಳೇದಗುಡ್ಡಾಕರ್
ಇತ್ತೀಚಿನ ಬರಹಗಳು: ರೇಶ್ಮಾ ಗುಳೇದಗುಡ್ಡಾಕರ್ (ಎಲ್ಲವನ್ನು ಓದಿ)

ಪ್ರಖರ ಬೆಳಕು ಕಾಣಿಸದು
ನನ್ನ ರೂಪವ ಅಂತರಂಗದ
ಪ್ರಲಾಪವ.

ಗಾಢ ಕತ್ತಲೆ ಕಾಣಿಸುವದು
ನನ್ನೂಳಗಿನ ನನ್ನು
ಅಲ್ಲಿನ ಬೆರಗನ್ನು !
ಅಬ್ಬಾ …… ಎನಿದು
ನನ್ನೂಳಗಿನ ಸ್ವಾರ್ಥ, ಸೇಡು
ಕೋಪ,ತಾಪದ ಬೆಂಕಿ
ಜಗತ್ತಿಗೆಲ್ಲಾ ಹಂಚಿದರು ಉಳಿಯುವದು !
ಆದರೂ ನಾನು ಎಂಬದು ಈ
ಜಗದ ಕಣ ….!!? ಹೊರಗೆ
ಗಾಂಧಿ ,ಬುದ್ದ,ನ ಬಣ್ಣ

ನನ್ನೂಳಗಿನ ಮಾತು
ಜಗದೇಲ್ಲ ಶಬ್ದಗಳ ನು ಸರಿಗಟ್ಟಿ
ನಿಲ್ಲುವವು…!?
ಆದರೂ ನಾನು ಏಕಾಂಗಿ
ವ್ಯಕ್ತಿ ಒಂದು ಒಳಗಿನ
ಅಭಿವ್ಯಕ್ತಿ ಹಲವು ….
ಕತ್ತಲೂಳಗಿನ ಬೆಳಕು
ದರ್ಶಿಸುವದು ಅಂತರಾಳವ
ಅಲ್ಲಿನ ನೈಜತನವ..

ಕಪ್ಪುಕತ್ತಲೆಯ ಮುಂದೆ
ಬಣ್ಣ ಬಣ್ಣದ ,ದಿವ್ಯ
ಬೆಳಕು ಮಂಕಾಯಿತು
ಸತ್ಯವ ಅರಿಯಲು ಸೋತಿತು …
ಕಪ್ಪು ಎಂದರೆ ಅಜ್ಞಾನ , ನಿರಾಶೆಯ ಕೋಪ
ಎಂಬ ಹಲವು ಮೂದಲಿಕೆಗಳು …
ಇದ್ದರು ಅಂಧಕಾರ ನಿನಗೆ ಸಾಟಿ ಇಲ್ಲ
ನೀನೆಂದರೆ ಭಯ ಅಲ್ಲ
ಒಳಗಣ್ಣು ತೆರೆಯಲು ಕತ್ತಲೂಳಗಿನ ಬೆಳಕು
ಕಾಣುವದಲ್ಲ…..