ಇತ್ತೀಚಿನ ಬರಹಗಳು: ಮಲಿಕಜಾನ ಶೇಖ (ಎಲ್ಲವನ್ನು ಓದಿ)
- ಭವ್ಯ ಭಾರತದ ಬಾಲಕ - ಜೂನ್ 12, 2021
- ಪುಟ್ಟನ ಮರ - ಜೂನ್ 5, 2021
- ಕನ್ನಡ ಕಂದ - ನವೆಂಬರ್ 1, 2020
ಕನ್ನಡ ನಾಡಿನ ಕಂದನು ನಾನು
ಕನ್ನಡವನ್ನೆ ಬೆಳಗುವೆನು..
ಅ,ಆ,ಇ,ಈ ಎನ್ನುತ್ತಾ ನಾನು
ಕನ್ನಡವನ್ನೆ ಕಲಿಯುವೆನು.
ಸಹ್ಯಾದ್ರಿಯ ಗಿರಿಕಂದರಗಳ
ಕಾವೇರಿ ಕೃಷ್ಣೆ ತುಂಗೆ ತೀರದಲಿ
ಶ್ರೀಗಂಧ ವನ್ಯಸಿರಿ ನಾಡಿನಲಿ
ಸೌಗಂಧ ತುಂಬಿದ ಮಣ್ಣಿನಲಿ
ಎಂದಿಗೂ ನಾನು ಮೆರೆಯುವೆನು..
ಹರಿಹರ ಕೃಷ್ಣರು ಕಟ್ಟಿದ
ಚಾಲೂಕ್ಯ ಕದಂಬರು ಆಳಿದ
ಚೆನ್ನಮ್ಮಾ ಓಬವ್ವಾ ಹೋರಾಡಿದ
ವೀರರು ಧೀರರು ಮೆರೆದಿಹ
ಶೌರ್ಯದ ಇತಿಹಾಸ ಕೇಳುವೆನು..
ಶರಣರು ದಾಸರು ಬದುಕಿದ
ಸೂಫಿ ಸಂತರು ಬೆಳಗಿದ
ಸತ್ಯ ಶಾಂತಿ ನಿತ್ಯ ನೀತಿ
ಐಕ್ಯ ಮಂತ್ರ ಸಾರಿದ
ಪಾವನ ನೆಲಕ್ಕೆ ನಮಿಸುವೆನು.
ರನ್ನ ಪಂಪರ ಅಪಾರ ಪಾಂಡಿತ್ಯ
ಕುವೆಂಪು ಬೇಂದ್ರೆಯ ಅಗಾಧ ಜ್ಞಾನದಿ
ಜೆ.ಪಿ ಬಿಚಿ ಗಿರೀಶ ಕಂಬಾರರ
ಭವ್ಯದ ಅಕ್ಷರ ಪಾಠವನು
ಕೇಳುತ ಓದುತ ನಲಿಯುವೆನು.
ಎಲ್ಲೆ ಇರಲಿ ಹೇಗೆ ಇರಲಿ
ಯಾರೆ ಇರಲಿ ಏನೇ ಬರಲಿ
ಕನ್ನಡ ಬಾವುಟ ಹಾರಿಸುವೆ
ಕನ್ನಡ ಡಿಂಡಿಂ ಬಾರಿಸುತಾ
ಕನ್ನಡ ತೇರನು ಎಳೆಯುವೆನು…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ