ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಝೀಬ್ರಾ ಕ್ರಾಸಿಂಗ್

ಶ್ರೇಯಸ್ ಪರಿಚರಣ್
ಇತ್ತೀಚಿನ ಬರಹಗಳು: ಶ್ರೇಯಸ್ ಪರಿಚರಣ್ (ಎಲ್ಲವನ್ನು ಓದಿ)

ನೋಡಿದಿರಾ ಈ ಚಿತ್ರ-ಎರಡು ಸಾಲು ಝೀಬ್ರಾ
ಸ್ಪಷ್ಟವಿಲ್ಲ ಅಂದಿರಾ ? ಅಂತಹದ್ದೇನೂ ಇಲ್ಲವಾ
ಒಮ್ಮೆಲೇ ಗೊತ್ತಾಗಲ್ಲಾ…ಜೂಂ ಮಾಡಿ ನೋಡಿ !
ಅದರ ಪಟ್ಟೆಗಳೆಲ್ಲಾ ನೆರಳಲ್ಲಿ ತುಂಬಾ ಸ್ಪಷ್ಟಾ-ರಿ
ಜೀವ-ಕ್ರಾಸಿಂಗ್-ನೆರಳ ಬೆಳಕ ಮಿಥುನ-ಇದೇನ್ರಿ
ಒಂದರ ಹಿಂದೆ ಇನ್ನೊಂದು…ಒಂದೆರಡು ಸಾಲು-
-ಶಿಸ್ತುಂಟು ! ಗಮ್ಯದೆಡೆ ಸಾಗು-ಬೇಡ ತಕರಾರು-
ಅದಕ್ಕೇ ಇರ್ಬೇಕು-ರಸ್ತೇಲೂ ಇದೇ ಕಾರುಬಾರು-
-ದಾಟಬೇಕ ?-ತಡಿ…ಬರ್ಲಿ ಟ್ರಾಫಿಕ್ ಸಿಗ್ನಲ್ಲು

ದಿನಕರ ದಿನ ಮುಗಿಸ್ತಿದ್ದ-ಇವು ತಮ್ಮ ಒಡೆಯನೆಡೆಗೆ
ಎತ್ತರದಿಂದ ತೆಗೆದದ್ದು-ನಿಮ್ಮ ಗೊಂದಲ ಸರಿಯೇ !
ಆ crossing-ಝೀಬ್ರಾಗಳ ಪಟ್ಟೆಗಳು ಮರಳ್ಮೇಲೆ
ರಸ್ತೆ-ಕ್ರಾಸಿಂಗ್ ಬಿಳೀ ಪಟ್ಟೆಗಳು ಡಾಂಬರಿನ ಮೇಲೆ
they carry stripes + souls within-ನಾವು ?
their shadows shade when they move !!!
ಪಟ್ಟೆಗಳ ದಾಖಲೆಯಿಲ್ಲ ನಮ್ಮಲ್ಲಿ-ಇನ್ನು ನೆರಳುಗಳೆ ?
ಆತ್ಮಗಳ ಸೈತ ನೆರಳುಗಳ ಮಾರಿದ್ದೀವಲ್ಲ ರಿಯಾಯಿತಿಗೆ
ದಾರಿ ಅಸ್ಪಷ್ಟ-ಕೇವಲ zombie ಕ್ರಾಸಿಂಗ್ ನಮ್ಮ ಪಾಲಿಗೆ

zebras cross : they hold/carry their Cross-Maker stripes them-shades their shadows-they hold their ground against all odds ಹೇಸರಗತ್ತೆ ಹೆಸರಿಗೆ-ಬೀಳಲ್ಲ ಕಂಡಕಂಡೋರ ಬಾಯಿಗೆ ಹುಟ್ಟು-ಬಾಳು-ಸಾವು /ಆಯಾ ಕ್ಷಣದ ಕ್ರಿಯೆ-ಪ್ರತಿಕ್ರಿಯೆ ಹೇಸರಗತ್ತೆಗಿದ್ಯ- metaphysics-ಅದೆಲ್ಲಿ ಯೋಚಿಸ್ತದೆ ?
ಇವನಿಗಿರೋದೇ ಅದು..ಇವ್ನು ಯರ್ರಾಬಿರ್ರಿ ಯೋಚಿಸ್ತಾನೆ !ಇಲ್ಲದ ಪಟ್ಟೆ-ಮಾರಿಕೊಂಡಾತ್ಮ ಹೇಗೆ ತುಂಬಿಕೊಳ್ತಾನೆ ?ಬಳಿದ ಪಟ್ಟೆ ಮೆದುಳಿಗೆ/ಗಳಿಗೆಗೊಂದು ಮುಖವಾಡವೇ !!!