ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾಲಿನಿ ವಾದಿರಾಜ್
ಇತ್ತೀಚಿನ ಬರಹಗಳು: ಮಾಲಿನಿ ವಾದಿರಾಜ್ (ಎಲ್ಲವನ್ನು ಓದಿ)

(ಜೋಗುಳದ ಹಾಡು)

ಭರತ ಭೂಮಿ ಕಂದ ನೀನು
ನಿನ್ನ ಮೆಟ್ಟಿ ನಿಲ್ಲುವರಾರು
ಚೆನ್ನಮ್ಮಾಜಿ ಅಬ್ಬಕ್ಕ ತಾಯಿ
ಮಡಿಲ ವೀರ ಕೂಸು ನೀನು

ಸುರಪುರದ ಕಿಡಿಯ ನೋಡು
ಮಡಿಕೇರಿ ಹುರಿಯ ಕಾಣು
ಮೈಸೂರಿನ ಹಿರಿಮೆ ಗರಿಮೆ
ನಿನ್ನ ಹೆಮ್ಮೆ ನಿನ್ನ ನಾಡು

ರಾಯ ನಿನಗೆ ಮಾದರಿ
ಓಬವ್ವ ನಿನ್ನ ದೀಪ ದಾರಿ
ಹಲಗಲಿಯ ವೀರಗಾಥೆ
ಋಣಿಯಾಗು ನೆನೆದು ಚರಿತೆ

ಉತ್ತು ಬಿತ್ತು ಬೆಳೆದ ಪೈರು
ಸಾಲು ಸಾಲು ಕಾರಖಾನೆ
ಉಗಿಬಂಡಿ, ಬಾನೋಡ
ಪ್ರಗತಿಯ ಹರಿಕಾರ

ಬೇರೆ ನಿಂತ ಭೂ ಭಾಗ
ಸೇರಿಸಿದ ಶ್ರೇಯಾ ನಾಡು
ನದಿ ಗುಡಿ ಧರ್ಮವ
ಎತ್ತಿ ಹಿಡಿದ ಪುಣ್ಯವೀಡು

ಮಂಗಳಕ್ಕೆ ಮಾರು ಹೋಗಿ
ದಿಟ್ಟ ಹೆಜ್ಜೆ ಇಟ್ಟ ನಾಡು
ಹಿಮಾಲಯ ಶಿರವ ಮೆಟ್ಟಿ
ಗೆದ್ದು ಬಂದ ವೀರ ಬೀಡು

ತಂತ್ರಗಳಿಗೆ ಪ್ರತಿ ತಂತ್ರ
ಹೆಣೆದು ಹಣಿದು ವೈರಿಗಳ
ಸೆಣೆಸಿ ಬಯಸಿ ಕಟ್ಟಿದಾ
ಪ್ರತಿಷ್ಠೆಯ ಸಿರಿ ನಾಡು

ಸ್ವಚ್ಛತೆಯೇ ನಿನ್ನ ಉಸಿರು
ದೇಶ ಪ್ರೇಮ ನಾಡಿ ಮಿಡಿತ
ದೇಶ ಸೇವೆ ನಿನ್ನ ಗುರಿಯು
ಮರೆಯದಿರು ಕಂದ ನೀನು

ನಾಳಿನ ಸೂರ್ಯ ಉದಯ
ತರಲಿ ಹೊಸದು ಆಶಯ
ಮೆರೆಯಲಿ ಭರತ ಖಂಡ
ಆಗಲಿ ವಿಶ್ವ ಗುರುವು