ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

‘ನಸುಕಿ’ನ ನೀತಿ ಸಂಹಿತೆ

ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಪ್ರಯೋಗಗಳನ್ನು, ಬರಹಗಳನ್ನು, ಲೇಖಕರನ್ನು ಲಕ್ಷಾಂತರ ಕನ್ನಡ ಓದುಗರ ಅವಗಾಹನೆಗೆ ತರತಕ್ಕಂಥ ಪ್ರಯತ್ನದೊಂದಿಗೆ ಹೊರ ಬಂದಿದೆ ಈ ನಸುಕು.ಕಾಮ್.

ನಸುಕಿನ ಓದುಗರು ಹಾಗೂ ಬರಹಗಾರರು ವಿಶ್ವದೆಲ್ಲೆಡೆ ವ್ಯಾಪಿಸಿರುವುದರಿಂದ ಅಂತರ್ ರಾಷ್ಟ್ರೀಯ​ ಮಾಹಿತಿ ಗೌಪ್ಯತೆ ಹಾಗೂ ಬೌದ್ಧಿಕ ಕಾಯಿದೆ ಹಾಗೂ ನೀತಿ ಸಂಹಿತೆಗಳು ಅನ್ವಯವಾಗುತ್ತವೆ

ಇಲ್ಲಿ ಪ್ರಕಟವಾಗುವ ಎಲ್ಲ ಬರಹಗಳು ಅದರಲ್ಲಿ ವ್ಯಕ್ತಪಡಿಸುವ ವಿಚಾರಗಳು ಲೇಖಕನದೇ ಆಗಿರುತ್ತವೆ.ಯಾವುದೇ ವಿಷಯಗಳ ಬಗ್ಗೆ ಒಂದು ವೇಳೆ ನಿಮ್ಮಲ್ಲಿ ಯಾವುದೇ ದೂರುಗಳಿದ್ದಲ್ಲಿ ನಮಗೆ ತಿಳಿಸತಕ್ಕದ್ದು. ಇಲ್ಲಿ ಬಳಸುವ ಚಿತ್ರಗಳು ರಾಯಲ್ಟಿ ಫ್ರೀ ,ಇಲ್ಲವೇ ಸ್ವಂತದ್ದು ಆಗಿರುತ್ತವೆ.

‘ನಸುಕು’ ಅನೇಕ ಲೇಖಕರ , ಬರಹಗಳ ಗುಚ್ಛವೇ ಹೊರತು ತನ್ನದೇ ಆದ ವೈಚಾರಿಕ ಅಭಿವ್ಯಕ್ತಿ ಹಾಗೂ ನಿಲುವುಗಳನ್ನು ಹೊಂದಿರುವುದಿಲ್ಲ.

ವಿನೂತನ ಪ್ರಯೋಗ, ಗಾಢ ಚಿಂತನೆ, ಅಚ್ಚರಿಗೊಳಿಸುವ ಕಲ್ಪನೆ, ಕಥೆ ಹೇಳುವ ಶೈಲಿಗಳಿಗೆ ಹೆಚ್ಚು ಒತ್ತು ಕೊಟ್ಟು ದಿನೇ ದಿನೇ ,ನಸುಕಿನ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಎಲ್ಲರನ್ನೂ ಗೌರವಿಸುವ, ಹಿರಿಯ ಕಿರಿಯ ಲೇಖಕರೆಂಬ ಭೇದ ಮಾಡದೆ ಮುನ್ನಡೆಸುವ ನಮ್ಮ ಪ್ರಯತ್ನಕ್ಕೆ ತಮ್ಮ ಸಹಕಾರ ಬೇಕು.

ನಸುಕಿನಲ್ಲಿ ನಾವು ಓದುವ, ಬರೆಯುವ ಪ್ರತಿ ಅಕ್ಷರ,ಕಳೆದ ನಿಮಿಷಗೆಲ್ಲ ಕನ್ನಡ ತಾಯಿಯ ಚರಣ ಕಮಲಗಳಿಗರ್ಪಿತ ಎನ್ನುವುದನ್ನು ಹೆಮ್ಮೆಯಿಂದ ಹೇಳಬಯಸುತ್ತೇವೆ.

ನಸುಕಿನಲ್ಲಿ ನಡೆವ ಅಕ್ಷರ ಯಜ್ಞಕ್ಕೆ ತಮ್ಮ ಜೊತೆಯಿರಲಿ ಎಂದು ಕೋರುತ್ತಾ…

ನಸುಕು.ಕಾಮ್ ಬಳಗ.

nasukuportal@gmail.com