ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾಳೆ ಶನಿವಾರ…!

ಧೀರೇಂದ್ರ ನಾಗರಹಳ್ಳಿ
ಪ್ರೊಫೈಲ್
ಇತ್ತೀಚಿನ ಬರಹಗಳು: ಧೀರೇಂದ್ರ ನಾಗರಹಳ್ಳಿ (ಎಲ್ಲವನ್ನು ಓದಿ)

ನಾಳೆ ಶನಿವಾರ —
ಶನಿವಾರವು ಅಷ್ಟಕ್ಕಷ್ಟೆ ಅದು ಬೇರೆ ಮಾತು !
ಆದರೆ ಶನಿವಾರವೆಂದರೆ ಆಫೀಸ್‌ ಲ್ಯಾಪ್‌ ಟಾಪ್‌ ದೂರವಿಟ್ಟು
ನನ್ನ ಜೀವನ ನನ್ನ ಶೈಲಿ ಎಂದು ಆಫಿಸ್‌ ಕೆಲಸ ಬದಿಗಿಟ್ಟು-
ಆಂತರ್ಯದ ಮೂಲೆ ಮೂಲೆ ಮೂಲೆಯೊಳಗಿಂದೆಲ್ಲವನ್ನು
ಬಿಡಿಸಿ ಕೊಂಡು ನನಗಾಗಿ ಕೇವಲ ನನಗಾಗಿ
ಬದುಕಿದ ಕ್ಷಣ!

ದಿನಂಪ್ರತಿ ಲ್ಯಾಪ್-ಟಾಪ್‌,ಲಾಗಿನ್‌
ನೆಟ್ವರ್ಕ,ಡೆಲಿವರಿ,ಇಶ್ಯೂ –
ಇವಿಷ್ಟನ್ನೆ ಬದುಕಾಗಿಸಿ ಕೊಂಡು
ಸುಮ್ಮನೆ ದುಡಿ ದುಡಿದು
ತಲೆ ಕೆಡಿಸಿಕೊಂಡು ಕೆಲಸ ಮಾಡಿ-
ಎಲ್ಲವನ್ನು ಮರೆತು ಸುಮ್ಮನೆ ಮಲಗಿದರೆ
ಮಲಗಿದಲ್ಲೂ ಅಷ್ಟೆ ಶಾಂತವಿಲ್ಲ –
ತಲೆಯೊಳಗದೇ ಆಲೋಚನೆಗಳು :
ಅರ್ಧವಾಗಿರುವ ಕೆಲಸಗಳು, ಕೈಗೆ ಸಿಗದ ಬೇಡಿಕೆಗಳು
ಸಣ್ಣದೊಂದು ತಪ್ಪಿಗೆ ಮೇಲೆ ಮೇಲೆ ಹಾರಿರುವ ಈ- ಮೇಲುಗಳು
ಜ್ವಾಲ ಮುಖಿಯೆ ತಲೆಯಲ್ಲಿ ಕುದಿಯುತ್ತಿರುವಾಗ –
ಇನ್ನೆಲ್ಲಿಯ ಶಾಂತತೆ?

ಶನಿವಾರ ವೆಂದರೆ ಅದೇನೊ
ಸಂಭ್ರಮ, ವಾರಂತ್ಯವೆನ್ನುವುದೆ ಸಡಗರ
ಒಟ್ಟಾಗಿ ಕೂಡಿಟ್ಟು ಸವಿದು ಬಿಡಬೇಕೆವನ್ನುವ ಬಯಕೆ-
ಆದರೇನು ?
ವಾರಂತ್ಯವೆನ್ನುವುದು ಕೈಗೆ ಸಿಕ್ಕಿದಕ್ಕಿಗಿಂತಲೂ
ಬಹು ವೇಗದಲಿ ಹಾರಿ ಹೋಗುವುದು.

ವಾರಂತ್ಯವು ಅಷ್ಟೆ ವಾರದ ದಿನಗಳ ನೆನೆದು ಹಾಳುಗೆಡುವುದು!
ವಾರದ ದಿನಗಳು ಅಷ್ಟೆ ವಾರಂತ್ಯದ ಹಳಿ ಹಳಿಕಯೆಲ್ಲಿಯೆ ಕಳೆಯುವುದು.

ಎದೆ ಒಡೆದು ಹೊಯಿತು
ಮತ್ತೆ ಸೋಮವಾರ ! ಹೌದು ! ಮತ್ತೊಂದು ಸೋಮವಾರ
ಹಾಗೆ…ನಾಳೆ ಮತ್ತೆ ಶನಿವಾರ !