ಇತ್ತೀಚಿನ ಬರಹಗಳು: ಡಾ. ಅಜಿತ್ ಹರಿಶಿ (ಎಲ್ಲವನ್ನು ಓದಿ)
- ನೂರು ನೂರು ತರಹ - ಏಪ್ರಿಲ್ 13, 2021
- ಅಜಿತ್ ಹರೀಶಿ - ಜೂನ್ 28, 2020
- ಮತ್ತೆ ಮಳೆ.. - ಜೂನ್ 6, 2020
ಬಾ ಬೆಳಗ ತೋರುವೆನಿಲ್ಲಿ
ಮುಂಜಾವಿನ ಈ ಹನಿಯ ನೋಡು
– ಭಾರ ಪರ್ಣದಲಿ
ನಭದಲಿ ಎಲೆಗೆ ಕಿರುಬೆರಳು ಸೋಕಿ
ಕಂಪಿಸಿ ತುದಿಗುಂಟ ಜಾರಿ
ಬಿಂದುವಾಗಿ ಬುವಿಯ ಮೇಲೆ ನಿಂದ
ನನ್ನಧರದ ಮೇಲೆ ಪ್ರೀತಿ ಹನಿದು ಬಿಂದುವಾಗಿ
ಕರಗಿ ನೀರಾಗಿ
ಎದೆಯೊಳಗಿಳಿದು ವಿರಹವಾಗಿ ಧರಿತ್ರಿಯೊಳಗಿಳಿವಾಗ
ಅಂತಿಮವೆಂಬಂತೆ ಕೈಬೀಸಿದ್ದ
ನೋಡಲು ಬಂದೆ
ದಿನಕರನ ಅಸ್ತದ ಸಮಯದಿ
ಸಂಧ್ಯೆ
ರಾಧೆಯೊಡಲ ಪ್ರೇಮ ಸಾಗರದದಿನಾರು
ಸಾವಿರ ತೆರೆಗಳು
ನವನೀತ ಚೋರ ವಿರಹದುತ್ಪಾದಕ
ಕಾಪಿಡುವ ವಿರಹದಲಿ
ಪ್ರಿಯರ ಸುಖವ ಕೊನೆತನಕ
ಹೆಚ್ಚಿನ ಬರಹಗಳಿಗಾಗಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ