ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತ್ರಿವೇಣಿ ಜಿ ಎಚ್
ಇತ್ತೀಚಿನ ಬರಹಗಳು: ತ್ರಿವೇಣಿ ಜಿ ಎಚ್ (ಎಲ್ಲವನ್ನು ಓದಿ)

ಇದೆಂಥ ವಿಚಿತ್ರ ಅಲ್ಲವೆ?
ಆಟಗಾರರು ಇಬ್ಬರೇ…

ಮಾತು ಮತ್ತು ಮೌನ….

ಮೌನ ಕೆಣಕುವ ಮಾತು
ಮಾತ ಹಿಂಡುವ ಮೌನ
ನಡುವೆ ಸಾಗುವ ಪಂದ್ಯ….
ಗೆಲುವ ಮಾನದಂಡವೇನು?
ಸರಳ ಸೂಚನೆಗಳ ಹೊರತಾಗಿಯೂ
ಪರಸ್ಪರರ ನಡುವೆ ನಡೆವ ಪಂದ್ಯ.

ಮುಗುಳ್ನಗೆ ಬೀರಿ
ಸವಾಲು ಹಾಕಿದಿರೋ
ಒಮ್ಮೆಲೇ
ಅನುರಾಗದಂಚಿಗೆ  ಮಾತಿನ ಓಟ…
ಬಿಗಿದ ತುಟಿಗೆ ಈಗ ಮೌನದ ಆಟ…
ಮರುಕ್ಷಣವೇ,
ಅಹವಾಲು ಸ್ವೀಕಾರ
ವಿಚಾರಣೆ…
ಕಣ್ಣುಗಳಿಗೆ ಕಡಿವಾಣ.
ಆಟದಲ್ಲಿ ನಿರತರಾದವರಿಗೆ ರಿಯಾಯಿತಿ ಇ(ರುವುದಿ)ಲ್ಲ.

ಬೆಚ್ಚಿ ಬಿದ್ದ ಮಾತು
ಎಷ್ಟೇ ಪ್ರಯತ್ನಿಸಿದರೂ ಹೊರಬಾರದೆ
ಒಳಗೆ ಸರಿದು..
ಅಲ್ಲೊಂದು ಬಾಂಧವ್ಯ ಮೂಡಬಹುದು
ನಾ ನಿನ್ನ ಬಿಡಲಾರೆ ಎನ್ನಬಹುದು

ಊಹೂಂ,

ಬೇಕಾಗಿಲ್ಲ ಸೋಲು ಗೆಲುವು

ಹಾಗಾಗಿ
ಆಟ ನಿರಂತರ ನಡೆಯುತ್ತಲೇ
ಇರುತ್ತದೆ; ಅವರವರ ಮಿತಿಗಳಲ್ಲಿ.