ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)
- ವಿಂಗಡಿಸಿ ನೋಡು - ಅಕ್ಟೋಬರ್ 23, 2022
- ಆ ರಾತ್ರಿ - ಸೆಪ್ಟೆಂಬರ್ 15, 2021
- ಪ್ರಮಾಣ - ಸೆಪ್ಟೆಂಬರ್ 5, 2021
ಹಾಗೊಂದು ಇದ್ದರೆ
ಅಂಗಳದ ಕುಂಡಗಳಲ್ಲಿ
ನಂಬಿಕೆಯ ಗಿಡಗಳಿರಲಿ
ಅಕ್ಕಪಕ್ಕದಲ್ಲಿ
ಮಕ್ಕಳ ನಗುವಿರಲಿ
ಕಲ್ಲು ಕಾಂಪೌಂಡುಗಳೂ
ಮಾತಾಡಲಿ
ದಣಿದು ಬಂದಾಗ
ಕೀಲಿ ಕದ ತೆರೆಯದೆ
ಹಿರಿಯ ಹಸ್ತ ಕರೆಯಲಿ
ಲ್ಯಾಪ್ ಟಾಪುಗಳಿಗೆ
ಸೊನ್ನೆ ಒಂದರೊಂದಿಗೆ
ಮನದ ಭಾಷೆಯೂ ಬರಲಿ
ರಿಲೈಯನ್ಸ ಫ್ರೆಶ್ ಗಳ
ದಿನಸಿಯ ಸಾಲಿನಲ್ಲಿ
ಸ್ನೇಹದ ಹಣ್ಣೂ ಇರಲಿ
ಕೊಳ್ಳುವಷ್ಟು ಕಾಸು
ಪರ್ಸಿನಲ್ಲಿ ಇದ್ದ ದಿನ
ಹಂಚುವೆ ಒಂದೊಂದು ಭಾಗ
ಸ್ನೇಹ ನಂಬಿಕೆಗಳು
ಬೆಲೆಗಾದರೂ ದಕ್ಕಿದರೆ
ಇರಲಿ ನೂರೆಂಟು ಜನುಮ
ಅಲ್ಲೆಲ್ಲ ನಾನಿರುವ ಹಂಬಲ
ನನ್ನೊಡನೆ ನೀವೂ ಇರುವಿರೆ?
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ