ಇತ್ತೀಚಿನ ಬರಹಗಳು: ಮಂಜುವಾಣಿ ಎಸ್. ಡಿ. (ಎಲ್ಲವನ್ನು ಓದಿ)
- ಬೋಧಿ ವೃಕ್ಷ - ಡಿಸಂಬರ್ 20, 2020
- ಉತ್ತುಂಗ - ಜೂನ್ 19, 2020
- ಬದಲಾಗಲಿ ಏಕೆ? - ಮೇ 31, 2020
ಬದಲಾದ ಕಾಲದೊಂದಿಗೆ ಸಾಗುವುದು ಹೇಗೆ..
ತನ್ನತನವನು ತೊರೆದು ನಾನಾಗಲಿ ಹೇಗೆ..
ಎದುರಿನವರ ನೋಟದಲಿ ಮೇಲೇರುವುದಕ್ಕಾಗಿ
ನನ್ನದೇ ದೃಷ್ಟಿಯಲಿ ನಾನು ಬೀಳಲಿ ಹೇಗೆ..
ಕಷ್ಟಪಟ್ಟು ಪಡೆದಿರುವೆ ಕಳೆದು ಹೋಗಿದ್ದ ನನ್ನನ್ನು
ಅಂಥ ಅಸ್ಥಿತ್ವವನ್ನು ನಾನೀಗ ಅಳಿಸಲಿ ಹೇಗೆ..
ಅರೆಬೆಂದ ಕನಸುಗಳು ಮುಲುಗುತ್ತಿವೆ ಮನದಲ್ಲಿ
ಅವುಗಳನು ನನಸಾಗಿಸದೆ ಹೊಸಕಿ ಹಾಕಲಿ ಹೇಗೆ?
ಉಸಿರಾಡುವುದನ್ನೂ ಮರೆತಿದ್ದವಳು ನಾನು
ಇತ್ತೀಚೆಗೆ ಬದುಕುವುದ ಕಲಿತೆ ಈಗ ಸಾಯಲಿ ಹೇಗೆ..?
ಇನ್ನಾರದೋ ಮೇಲಲ್ಲ ನನಗೆ ನನ್ನ ಮೇಲೆ ಪ್ರೀತಿ
ಜಗತ್ತಿನ ರೀತಿ-ನೀತಿಗಾಗಿ ನಾನು ಬದಲಾಗಲಿ ಏಕೆ?
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ