ಇತ್ತೀಚಿನ ಬರಹಗಳು: ನಾಗೇಶ ಮೈಸೂರು (ಎಲ್ಲವನ್ನು ಓದಿ)
- ಭಾವದೊಲುಮೆ - ಜುಲೈ 13, 2021
- ನಮ್ಮ ನಡುವೆ - ಡಿಸಂಬರ್ 12, 2020
ಭಾವದೊಲುಮೆ ತೇರನೇರಿ
ನಿನ್ನ ದಾರಿ ಕಾದೆನು
ಜಾವದಿರುಳು ಕಳೆಯಿತೀಗ
ಇನ್ನು ಜಾಡ ಕಾಣೆನು ||
ಯಾಕೋ ಬರದೆ ಹೋದೆ ನೀನು
ಅರಿಯದಾದೆ ಕಾರಣ
ಬೇಕು ಬೇಡ ಎನದೆ ಹೋದೆ
ಕಾಣದಾಗೆ ತಲ್ಲಣ ||
ಮೂರು ನುಡಿಯ ನೆನಪು ಮಧುರ
ನೆನೆದು ಅಧರ ಕಾತರ
ಹೇಳೊ ನೀನೆ ಮಾಯವಾದೆ
ಎದೆಗೆ ನೋವ ಬಿತ್ತರ ||
ಭಾವ ಗೀತೆ ಬರೆದ ಮಾತೆ
ಹಾಡಿ ತಣಿದೆ ಮರೆತೆಯ?
ಏನೊ ಮಾತು ಇರಿಯಿತೇನು?
ದೂಡಿ ಬದಿಗೆ ಸರಿದೆಯ? ||
ತೊರೆದು ಹೋದೆ ಇರಿಸಿ ಬಾಧೆ
ಅಳಿಸದಂತೆ ಶಿಲೆಯಲಿ
ಉಳಿಸಿ ಹೋದೆ ಕೆಣಕಿ ಶೋಧೆ
ಸಿಲುಕಿಸೆನ್ನ ಬಲೆಯಲಿ ||
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ