ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭಾವೈಕ್ಯತಾ ಭಜನೆ

ಶ್ರೇಯಸ್ ಪರಿಚರಣ್
ಇತ್ತೀಚಿನ ಬರಹಗಳು: ಶ್ರೇಯಸ್ ಪರಿಚರಣ್ (ಎಲ್ಲವನ್ನು ಓದಿ)

               ಇಡೀ ವಿಶ್ವವೇ ನಾನು.. ಹನಿಯೊಳಗಿನ ಸಾಗರವು

               ನನಗೇನಾದ್ರೂ ಅದಕ್ಕೂ, ಅದಕ್ಕೇನಾದ್ರೂ ನನಗೂ

               ಒಳ್ಳೆ ಥಿಯರಿ: ಎಲ್ಲರಿಗೂ ಅನಿಸಿದ್ರೆ, ಬೆಳಗೋ ಬೆಳಗು

               ನಾಲಿಗೆಗೆ ಬೇಕು,ದೇಹಕ್ಕೆ ಬೇಡ…ರಾಜಿ : ತಿಳೀಸಾರು

               ಅವೆರಡೂ ಒಂದೇ , ಆಗಾಗ ಒಂದಿಷ್ಟು ಮತ್ಸರವು

               ಕಿವಿಗದೇ ವರಾತ, ಅದರ ಬಯಕೆ ಜನರಾಡದ್ದೇ!

               ನಾಲಿಗೆ,ಕಿವಿ,ಕಣ್ಣು ದೇಹದ ವಿರುದ್ದ ನಿಲ್ಲೋದೆ?

               ದೇಹ ಗೆದ್ದಾಗ ಅಹಮ್ಮೇ ಗರಿಕೆದರಿ ಬೀಗೋದು..

               ಅದ್ಕೆ ನೋಡಿ-ಬಲಾಢ್ಯ ಬೀದ್ಬೀದಿ ಮೆರೆಯೋದು!

               ಒಂದು ಸಾರಿ ಕಿಟಕಿ ಮುಚ್ಚಿ  ಹೊರಗೆ ಬಂದು ನೋಡಿ

               ಹೊರ್ಗೂ ಅದೇ ಕತೆ ವ್ಯಥೆ, ಬೇಕಿದ್ದು ಯಾರ್ಗೂ ಸಿಕ್ಕಿಲ್ರಿ!

               ಸಿಗಿಸಿಕೊಂಡು ಬಿಡೋ ಹಟ, ಹೋರಾಟ, ಕೆಟ್ಟ ರೈವಲ್ರಿ

               ಯಾರ್ಗುಂಟು.. ಯಾರಿಗಿಲ್ರಿ?ಸಿಗದಿರೋರಿಗೆ ಹೊಟ್ಟೆ ಉರಿ!

               ಟ್ರಿಲಿ,ಬಿಲಿಯನ್ ಜೀವಕೋಶ..ಅಗಣಿತ ಭಾವ,ರಾಶಿ!

               ಇಲ್ಲದ ಭಾವೈಕ್ಯತೆ, ಕೆಟ್ಟ ತಮಾಷೆ, universal ಕಸಿವಿಸಿ

               ಆಯ್ತು ಎಲ್ಲಾ ಶುರು ..ಅದ್ಯಾರು?ಯಾವುದೂ? ಸರ್!

               ಎಡ ಬಲ ಮಧ್ಯ ಯಾವ್ಕಡೆ ಪಂಚಾಯಿತಿ ಚೇರ್ಮನ್?

               ಈವರೆಗೂ ಕಾಣ್ದೋನು ಅಂದಿದ್ನಾ ಎಲ್ರ ಕಣ್-ಮುಂದೆ?

               ಹಾಗಿದ್ರೆ ಆನಂತರ ಕಣ್ಮರೆಯಾಗಿದ್ದು.. ಹೇಳಿ ಸರಿಯೇ?

               ನಮ್ಮೊಳಗೇ ಅವ ಕಣ್ಮರೆ !!! ಜೀವಿಗಳ ‘ಜೀವ’ಅವನೇ?

               ಪುಟಿನನೂ, ಅವನೆದುರಿಗಿನೋನು ಇಬ್ಬರೂ ಒಂದೇ?

               ಯಾಕೀ ತಕರಾರು ?ಏನೀ ಅಹಂ? ಇನ್ಮೇಲೆ ಮುಂದೇನು?

               ಹಾ!ನಾನು,ವಿಶ್ವ,ಹನಿ,ಸಾಗರ..! ಥಿಯರಿ ಭರ್ಜರಿ ಸೋಲು!

               ಗಿಡುಗ v/s ಗುಬ್ಬಿ….ಕೊಲೆಗಡುಕ ಗಿಡುಗನೇ ಗೆದ್ದಿರೋದು