- ಒಕಾಪಿಗಳ ಲೋಕದಲ್ಲಿ - ಅಕ್ಟೋಬರ್ 27, 2024
- ಮಹಾಸಾಗರವಾದಳು - ಸೆಪ್ಟೆಂಬರ್ 13, 2024
- ಅಂಟಿಗೆ ಪಿಂಟಿಗೆ: - ನವೆಂಬರ್ 16, 2020
ಸಾಗರದಲಿ ಲೀನಳಾಗಿ ಮುಕ್ತಳಾಗುವ ಬಯಕೆ ಹೊತ್ತ ನದಿತಾಯಿಯೂ
ಕಡಲಭೇಟಿಗೆ ಮೊದಲು ನಡುಗುತ್ತಾಳೆ ಭೀತಿಯಿಂದ ಹೆದರಿ..
ತಾನು ಸಾಗಿ ಬಂದ ದಾರಿಗುಂಟ ಕವಲುಗಳ ಹಿಂತಿರುಗಿ ದಿಟ್ಟಿಸುತ್ತಾಳೆ
ತಾನು ಧುಮುಕಿದ ಎತ್ತರದ ಪರ್ವತ ಗಿರಿಶೃಂಗ ಶಿಖರಗಳ ತುದಿಯಿಂದ ಕಣಿವೆಗಿಳಿದ ಕಂದಕದ ಹಾದಿ,
ತಾನು ದಾಟಿದ ದಟ್ಟಾರಣ್ಯ, ಜನವಸತಿಯ ತೀರ, ಹಳ್ಳ-ದಿಣ್ಣೆಗಳ ಅಂಕುಡೊಂಕು ದಾರಿ,
ಈಗವಳ ಮುಂದೆ ಹರಡುಕೊಂಡಿದೆ ವಿಶಾಲ ಸುನೀತ ಮಹಾಸಾಗರದ ಬಟಾಬಯಲು
ನದಿತಾಯಿಗೆ ಶಾಶ್ವತವಾಗಿ ಕಣ್ಮರೆಯಾಗಲು ಇದಕ್ಕಿಂತ ಸೊಗಸಾದ ಕೊನೆಯ ತಾವು ಮತ್ಯಾವುದು ಬೇಕು?
ನದಿಯಮ್ಮಳಿಗೆ ಇನ್ಯಾವ ದಾರಿಯುಂಟು ಈಗ; ಹಿಂತಿರುಗಿ ಹೋಗಲಾರಳಾಕೆ!
ಅವಳ ಹಾಗೆ ಜೀವನಾನುಭವ ಸವೆಸಿ, ಹರಿದು ಬಂದವರು
ಯಾರೂ ಮತ್ತೆ ಹಿಂತಿರುಗಲಾರರು; ಬಂದ ದಾರಿಯತ್ತ ಮತ್ತೆ ಬೆನ್ನ ತಿರುಗಿಸಿ,
ಈ ಸೃಷ್ಟಿಯಲ್ಲೇ ಹಾಗೆ ಹಿಂದೆ ತಿರುಗಿ ಪಯಣಿಸುವ ಅಸ್ತಿತ್ವಗಳೇ ಇಲ್ಲ; ಹಾಗಾಗುವ ಕ್ರಿಯೆ-ಕಾರ್ಯಗಳು ಅಸಾಧ್ಯ..
ನದಿತಾಯಿ ಮಹಾಸಾಗರದ ನೀಲಿಯಲ್ಲಿ ಲೀನಳಾಗುವ ಅಪಾಯವನ್ನು ಎದುರಿಸಲೇಬೇಕು;
ಆ ಅಂತಿಮ ಪ್ರವೇಶದಿಂದ ಮಾತ್ರವೇ ಅವಳೊಡಲಿನ ದುಗಡಗಳು ಶಾಶ್ವತವಾಗಿ ಮಾಯವಾಗುವುದು..
ನದಿತಾಯಿಯ ತಿಳಿವಳಿಕೆಗೆ ಅರಿವಾಗುವ ಸತ್ಯವೊಂದಿದೆ ಇಲ್ಲಿ,
ಅದೇನೆಂದರೆ, ಈ ಮಹಾಮಿಲನ ಅವಳು ಮಹಾಸಾಗರದಲ್ಲಿ ನಾಪತ್ತೆಯಾಗುವ ಘಟನೆಯಲ್ಲ..
ನದಿತಾಯಿ ಕೆಲವೇ ಕ್ಷಣಗಳಲಿ ಮಹಾಸಾಗರವಾಗಿ ಬದಲಾಗುವ ಪ್ರಕ್ರಿಯೆಯಿದು..
ಭಾವಾನುವಾದ – ವಿಶ್ವಾಸ್ ಭಾರದ್ವಾಜ್ (ವಿ.ಭಾ)
(ಖಲೀಲ್ ಗಿಬ್ರಾನ್ ಬರೆದ Fear ಪದ್ಯದ ಭಾವಾನುವಾದ)
ಹೆಚ್ಚಿನ ಬರಹಗಳಿಗಾಗಿ
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ
ರೆಕ್ಕೆ ಇದ್ದರೆ ಚೆನ್ನಾಗಿತ್ತು