ಇತ್ತೀಚಿನ ಬರಹಗಳು: ನೂತನ ದೋಶೆಟ್ಟಿ (ಎಲ್ಲವನ್ನು ಓದಿ)
- ವಿಂಗಡಿಸಿ ನೋಡು - ಅಕ್ಟೋಬರ್ 23, 2022
- ಆ ರಾತ್ರಿ - ಸೆಪ್ಟೆಂಬರ್ 15, 2021
- ಪ್ರಮಾಣ - ಸೆಪ್ಟೆಂಬರ್ 5, 2021
ಸಾಗರದಲಿ ಏಳನೆಯ ಅಲೆ ಬಹು ದೊಡ್ಡದು
ಬಳಿ ಸೆಳೆದುಕೊಳ್ಳುವ ಹಂಬಲ ಅದಕೆ
ಅಪ್ಪುಗೆಯಲ್ಲಿ ಇರದ ಸವಿ ನೋವು
ಮೈಮನಗಳ ನವಿರಿಗೆ ಉತ್ತರವೇ ಇರದ ಶೂನ್ಯತೆ
ಆಗ್ರಹವೆಲ್ಲ ಬರೀ ಜಾರು ಮರಳು
ಜೋಡಿ ಹಿಡಿತದಲಿ ಆಣೆ-ಪ್ರಮಾಣಗಳ ಸುಳಿವಿಲ್ಲ
ಚಾಚಿದ ಅಲೆಗಳದು ಬರಿ ಮೈಯ ಹುಡುಕಾಟ
ಕಂಗಳ ಬೆಳಕು ಕ್ಷೀಣಿಸುತಿದೆ
ಬರಿದಾದ ಒಳಮನೆಗೆ ಕತ್ತಲು ಭಯವಿದೆ
ಸಂದುಗಳಲಿ ಚೀರುವ ಕದಗಳು
ಹಿತಸ್ಪರ್ಶ ಬಯಸುವುದು ತಪ್ಪೇನು?
ಮೀರಾ ಹಾಡುತ್ತಾಳೆ
ಮೊರೆ ಕೇಳದ ಮಾಧವನೆದುರು
ಒಳಮನೆಯಲಿ ಅವನ ಬೆಳಕ ತುಂಬುತ್ತಾಳೆ
ಏಕತಾರಿಯ ನಾದದಲೆಯಲಿ ತೇಲಿ
ನೋವ ಮೀಟಿಗೆ ಹೆಜ್ಜೆ ನಲಿಯುತಿದೆ
ಗೆಜ್ಜೆ ಉಲಿಯುತಿದೆ
ಕಣ್ಣಳತೆಗೆ ದೂರ ಸಾಗಿದ ದಾರಿಯಲಿ
ಹಂಬಲಿಕೆ ಮಿಡಿಯುತಿದೆ
ಅವನ ನೆನಪಲ್ಲಿ
ಇರದ ಇರುವಿಕೆಯ ಮೋಡಿ ಕಾಡುತಿದೆ
ಇಲ್ಲೇ ಇಹನಲ್ಲ ಸನಿಹ
ಮುಚ್ಚಿದ ಕಂಗಳ ಆಂತರ್ಯದಲಿ ಮಿಂಚಸೆಲೆ
ಕಾತರಿಸುವ ಮೊಗದಲ್ಲಿ ಹೂನಗೆ
ಆಕೆ ಹಾಡುತ್ತ ನಲಿಯುತ್ತಾಳೆ
ಸುಖವನೆಲ್ಲ ಹೀರುತ್ತಾಳೆ ಊಹೆಯಲಿ
ಧನ್ಯ ಮಾಧವ ನೀನು!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ