- ಮುಗಿಲ ಮಳೆ …. - ಏಪ್ರಿಲ್ 18, 2021
- ಡಾರ್ಕ್ ಮೋಡ್ - ಏಪ್ರಿಲ್ 4, 2021
- ಸಾಗರದೊಳಗಿನ ಮೌನ - ಅಕ್ಟೋಬರ್ 24, 2020
ಎಡೆಬಿಡದೆ ಸುರಿವ ಮಳೆ
ತಡಮಾಡದೆ ಮೋರಿ,ಗಟಾರ
ತುಂಬಿ ಹರಿಸುವೆ ಆದರೆ
ಮನವ ತೊಳೆಯದೆ ಹೋದೆ..
ಅದೆಲ್ಲಿಂದಲೋ ತಂಗಾಳಿಯೊಂದಿಗೆ
ಬಂದು ಧರೆಯ ತಂಪು ಮಾಡಿ
ವರ್ಷಧಾರೆ ಎನಿಸಿಕೊಂಡೆ
ನಡೆವ ಹಾದಿಯಲ್ಲಾ ಸ್ವಚ್ಚಮಾಡಿದೆ …
ರಸ್ತೆಯ ಕಸವ ಹೊತ್ತೊಯ್ಯುವೆ ,ಆದರೆ
ನಮ್ಮ ಆಲೋಚನೆಗಳ ಶುಭ್ರಮಾಡದೆ ಬಿಡುವೆ ….
ಮರಗಳ ಬೇರುಗಳು ಭದ್ರವಾದವು
ಗಿಡಗಳು ಚಿಗುರಿ ನಗುತ
ನಿಂತವು ಕಾಲಕಾಲಕ್ಕೆ ನಡೆಯುವ
ಪ್ರಕ್ರಿಯೆ ಹೊಸತನವ ನೀಡುವದು
ಪ್ರಕೃತಿಯಲ್ಲಿ ಮಾನವನ ಬಿಟ್ಟು
ಎಲ್ಲವು ಹೊಸದಾಗಿ ಕಂಗೊಳಿಸುವವು ….!!
ಹಕ್ಕಿ ಪಿಕ್ಕಿಗಳು ಹರ್ಷದಿ ಮುಗಿಲು
ಮುಟ್ಟುವ ತವಕದಲಿ ಹಾರಿದವು
ಬಾನು ತನ್ನೊಡಲಲಿ ತುಂಬಿಕೊಂಡಿತು
ಖಗ ಸಂಕುಲವು ಮಮತೆಯ ಗೂಡಾಗಿತ್ತು
ನಮ್ಮವರ ನಾವು ದೂರಮಾಡಿ
ಯಂತ್ರಗಳೂಂದಿಗೆ ಮಾತಾಡುವಂತಾಯಿತು
ಕನಸುಗಳು ಕನವರಿಸುತ್ತಲೆ
ನಾವುಗಳು ಭವಿಷ್ಯದ ಚಿಂತೆಯಲ್ಲಿ
ವಾಸ್ತವ ದೂಡಿದೆವು
ತೇಪೆಹಾಕಿದ ಸ್ವಾರ್ಥ ಸಂಗತಿಗಳ
ಮತ್ತೆ ಮತ್ತೆ ಕಾಪಿಟ್ಟು
ಸಂಭ್ರಮಿಸುವೆವು…!?
ಸವಿನುಡಿಯ ಮರೆತು
ಒಡನಾಡಿಗಳ ತೊರೆದು
ಒಪ್ಪಂದದ ಕೋಟೆಯಲಿ
ಕುದಿಯುತ್ತಲೇ ಇರುವೆವು ……
ದಿನಕ್ಕೂಂದು ಮುಖವಾಡ ಧರಿಸುತ್ತಾ……!!!!!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ