ಇತ್ತೀಚಿನ ಬರಹಗಳು: ಶ್ರೀಕಾಂತ ಮಳೆಗಲ್ (ಎಲ್ಲವನ್ನು ಓದಿ)
- ಮೌನ ರಾಗ - ಅಕ್ಟೋಬರ್ 10, 2021
ನಿನ್ನ ನಯನದ ಕಿರಣಗಳು ಸುಡುತಲಿವೆ
ಮೌನದ ಕಾವಿನ ಅಂತರಕೆ
ಬಯಸಿದ ದಿನವೆಲ್ಲಾ ಚಡಪಡಿಕೆ; ದಿನ ದಿನ
ಊಹೆಗೂ ಮೀರಿದ ಪ್ರೀತಿಯ ಕಲರವ
ಮಾತಿಗೂ ನಿಲುಕದ ಬಿನ್ನಾಣ
ಮರೆಯುವ ಮೊದಲು ಕಾಣುವೆಯಾ ಹಾಗೆ ಸುಮ್ಮನೆ !
ಕನವರಿಕೆಯ ಕೋರಿಕೆಗಳು ನೂರಾರು
ಸವಿ ಸಲ್ಲಾಪದ ವಿರಹ ಮಾತ್ರ ನಿನ್ನೊಡನೆ ಸಾಗಲಿ
ನನ್ನಯ ಒಲವಿನ ಕಾಣಿಕೆ..
ಹೇ! ಇಷ್ಟೊಂದು ಮೌನದ ಬಹಿಷ್ಕಾರ ಸಾಕು
ಅತ್ಯಂತವಾಗಿ ಬಸವಳಿದಿರುವೆ ನಿನಗಾಗಿ
ಕಾರಣ ನೀಡದೆ ; ಸುಮ್ಮನಾಗಿ ನಿನ್ನಲೇ ತನ್ಮಯ
ಹಲವು ಪ್ರಶ್ನೆ ಮೂಡುತಲಿವೆ ನನ್ನಲಿ
ಮಲಯ ಮಾರುತವಾಗದಿರು
ಕೋಪಾಗ್ನಿಗೆ ಕೈ ಕೊಡದಿರು
ಸುಡುಬಿಸಿಲಲೂ ನೆಮ್ಮದಿಯ ಕನಸಿದೆ
ತಂಪಾದ ಮನಕೆ ಬೆಚ್ಚಗಿನ ಗೂಡಿದೆ
ನಿನ್ನ ನೆನಪಿನಲೂ ಸುಖವಿದೆ
ಬಾಳಪಯಣದ ಬಿರುಗಾಳಿಗಳು ನೂರಾರು
ಬಯಸಿದ ಮೌನರಾಗ ಮಾತ್ರ
ನೀನೇ ಮೊದಲು ; ನೀನೇ ಕೊನೆ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ