ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿತೆಗಳು ತನ್ನ ಪ್ರಾಮಾಣಿಕತೆಗಳನ್ನು ಕಳೆದುಕೊಂಡರೆ ಹೇಗೆ ಎನ್ನುವುದನ್ನು ಮಾರ್ಮಿಕವಾಗಿ ರುದ್ರೇಶ್ವರಸ್ವಾಮಿ ಅವರು ಈ ಕವಿತೆಯಲ್ಲಿ ವಸ್ತು ನಿಷ್ಠವಾಗಿ ಬರೆಯುತ್ತಾರೆ...

ಮೊದಮೊದಲು ಇವನು
ಬರೆದ ಕವಿತೆ-
ಗಳನ್ನು ಅವಳು, ಅವಳು ಬರೆದ ಕವಿತೆಗಳನ್ನು
ಇವನು
ಗುಟ್ಟಾಗಿ ಓದಿಕೊಳ್ಳುತ್ತಿದ್ದರು.
ಒಬ್ಬರ ಬಗ್ಗೆ,
ಇನ್ನೊಬ್ಬರಿಗಿದ್ದ ಆಲೋಚನೆಗಳು
ಕವಿತೆಯಲ್ಲಿ ಪ್ರಾಮಾಣಿಕವಾಗಿ
ಅನಾವರಣಗೊಂಡವು. ಇವನು
ಬರೆದದ್ದನ್ನು ಅವಳು,
ಅವಳು ಬರೆದದ್ದನ್ನ ಇವನು ಓದುವುದು
ಇಬ್ಬರಿಗೂ ಗೊತ್ತಿತ್ತು.

ಕೆಲಕಾಲ ವಸ್ತುನಿಷ್ಠತೆ ಇತ್ತು
ಕವಿತೆಗಳಲ್ಲಿ.

ನಂತರ, ಅವಳನ್ನು ಮೆಚ್ಚಿಸಲು ಇವನು,
ಇವನನ್ನು ಮೆಚ್ಚಿಸಲು
ಅವಳು ಕವಿತೆ ಬರೆದರು.
ನಿಧಾನವಾಗಿ
ಆತ್ಮವಂಚನೆ ನುಸುಳಿತು ಕವಿತೆಯ
ಅಂತರಾಳದೊಳಗೆ.

ಕೆಲವೊಮ್ಮೆ ಗೊತ್ತಿದ್ದೂ,
ಕೆಲವೊಮ್ಮೆ
ಗೊತ್ತಿಲ್ಲದೆ, ಒಬ್ಬರು ಇನ್ನೊಬ್ಬರ ಮೇಲೆ
ಪ್ರಭಾವ ಬೀರಿದರು
ನಿಜವಾದ ಒಳಗಿನ
ಪಸೆ ಬತ್ತಲಾರಂಭಿಸಿತು.

ಅವನು ಲಾಂಗಿಂಗ್ ಫಾರ್
ಎನ್ನುವ ಪದಕ್ಕೆ
ವ್ಯಾಖ್ಯಾನ ಬರೆದರೆ, ಅವಳು ಲೀನಿಂಗ್-
ಟೂವರ್ಡ್ಸ್ ಪದದ
ಆಳಕ್ಕಿಳಿದು ಧ್ಯಾನಿಸುತ್ತಿದ್ದಳು…