ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ಥಾವರ ಮೌನ

ಬಾಯ ಬಂದೀಖಾನೆಯಿಂದ ತಟಸ್ಥ ಮಣೆಯೇರಿ ಕೂತ 'ಸ್ಥಾವರ ಮೌನ’ ದವರೆಗಿನ ಸಂಕ್ರಮಣದ ಬಗ್ಗೆ ಮಾರ್ಮಿಕವಾಗಿ ಬರೆದವರು ಲೇಖಕಿ ಮಂಜುವಾಣಿ..
ಮಂಜುವಾಣಿ ಎಸ್. ಡಿ.
ಇತ್ತೀಚಿನ ಬರಹಗಳು: ಮಂಜುವಾಣಿ ಎಸ್. ಡಿ. (ಎಲ್ಲವನ್ನು ಓದಿ)

ಬಾಯ ಬಂದೀಖಾನೆಯಿಂದ
ಬಿಡುಗಡೆಯಾಗಿ
ಅವರಿವರ ಕಿವಿಯ ಕದವ ತಟ್ಟಿ
ಹೃದಯದ ಹೊಸ್ತಿಲನು ಮೆಟ್ಟಿ
ನೇರ ಮತ್ತು ಸ್ಪಷ್ಟ
ಅರ್ಥವನು ತೊರೆದು
ಅಪಾರ್ಥದ ಅಪಘಾತಕ್ಕೀಡಾಗುತ್ತಾ
ಒಂದು ನಾಲಿಗೆಯಿಂದ
ಮತ್ತೊಂದು ನಾಲಿಗೆಗೆ ನೆಗೆದು
ಎಲ್ಲೆ ಮೀರಿ ಅಲೆದು ಬರುವ
‘ಅಲೆಮಾರಿ ಮಾತು’ಗಳಿಗಿಂತ,
ಒಳಮನೆಯ ಕೋಣೆಯಲಿ
ತಟಸ್ಥ ಮಣೆಯೇರಿ ಕೂತ
‘ಸ್ಥಾವರ ಮೌನ’
ಬಲು ಕ್ಷೇಮ.