ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)
- ಹುಣ್ಣಿಮೆ ರಾತ್ರಿ ದೇವರಾಡುವನು - ಜನವರಿ 1, 2025
- ಮರಿಹಕ್ಕಿ ಮರಳಿತು ಕಾಡಿಗೆ… - ಅಕ್ಟೋಬರ್ 29, 2024
- ಕೆಟ್ಟಿದ್ದು ಕಾಲವಲ್ಲ ಮತ್ತು ಒಡಲ ನುಡಿಗಳು - ಮಾರ್ಚ್ 25, 2023
ಹುಣ್ಣಿಮೆ ರಾತ್ರಿ ದೇವರಾಡುವನು
ಹೊಂಬಣ್ಣದ ಚಂಡು
ದೇವಿಯ ಸಹಸ್ರ ಕಣ್ಣು ಮಿನುಗುತಿವೆ
ಅವನ ಹರುಷ ಕಂಡು
ಬಾನಿಂದಿಲ್ಲಿಯವರೆಗೂ ಹರಿದಿದೆ
ನಗುವಿನ ನೊರೆಹಾಲು
ಚಂಡಾಡುತ್ತಲೆ ದೇವ ಹೇಳುವನು
ಹಿಗ್ಗುತಿರಲಿ ಬಾಳು
ಕತ್ತಲು ರಾತ್ರಿಗಳಲ್ಲೂ ಬೆಳಕಿನ
ನೆನಪುಗಳಿರಬೇಕು
ಬೆಳಕಿನ ಹೊಳೆಯಲಿ ಒಮ್ಮೆಯಾದರೂ
ಮುಳುಗೆದ್ದರೆ ಸಾಕು
ದೇವಿ ಹೇಳುವಳು ಬೆಳಕಿನ ಹೊನಲಿನ
ಚಂಡಿನಾಟ ನೋಡಿ
ಬನ್ನಿ ಮಕ್ಕಳೇ ದೇವರ ಜೊತೆಗೆ
ನೀವೂ ಆಟವಾಡಿ
Excellent Sir.
ಹುಣ್ಣಿಮೆ ರಾತ್ರಿಯಲ್ಲಿ ಜರುಗುವ ವಿಜ್ರಂಭಣೆಯ ಕಲಾಪಗಳನ್ನು ಶಬ್ದಗಳಲ್ಲಿ ಅನುವಾದಿಸಿಡುವ ಹರ್ಷದ ಕ್ಷಣಗಳು – ಕವಿಯ ಕಣ್ಣಿನಲ್ಲಿ – ರೂಪಕಗಳು ಕಲಕುವ ವಾಸ್ತವಕ್ಕೆ, ಧನಾಶಯದ ಬೆಳಕಿನಿಂದುಕ್ಕುವ ಬಾಲ್ಯದ ಅನಾಮಿಕತೆಯ ಎರಕ ಸುರಿದಂತಿದೆ!
ಸೃಜನಶೀಲ ಕವಿಗಳಿಂದ ಮಾತ್ರ ಇಂತಹ ರೂಪಕಗಳುಳ್ಳ ಪಾಂಡಿತ್ಯಪೂರ್ಣ ಸಾಲುಗಳು ಹೊರಹೊಮ್ಮಬಲ್ಲವು,
ಕೆಲವೇ ಪದಗಳಲ್ಲಿ ವಿಶಿಷ್ಟವಾದ ಸಂದೇಶವನ್ನು ನೀಡುವಲ್ಲಿ ವಿದ್ವಾಂಸ ಚಿಂತಾಮಣಿ ಕೊಡ್ಲೆಕೆರೆಯವರು ಸಫಲರಾಗಿದ್ದಾರೆ.
ಅಭಿನಂದನೆಗಳು
Very nice!
ಸೊಗಸಾದ ಪದ್ಯ
ಸುಂದರ ಕವನ, ಚೆಂದದ ಅಭಿವ್ಯಕ್ತಿ
ಅಂದದ ರೂಪಕದ ಕಾವ್ಯ ಶಕ್ತಿ.
-ನಾರಾಯಣ ರಾಯಚೂರ್
ಹುಣ್ಣಿಮೆಯ ಆಗಸದಿ ಚುಕ್ಕಿ,ಚಂದ್ರಮರ ಚೆಂಡಿನಾಟದ ಸೊಗಸಾದ ಗಾನ ಲಹರಿ,
ಬೆಳದಿಂಗಳ ನೊರೆ ಹಾಲಿನಂತೆ ಉಕ್ಕಿದೆ ಕಾವ್ಯ.