- ಕೂಡಿ ಹಾಕಿದ ಬೆಕ್ಕು ಮತ್ತು ಇನ್ನೊಂದು ಕವಿತೆ - ಅಕ್ಟೋಬರ್ 23, 2022
- ಮತ್ತೇನಿಲ್ಲ - ಜೂನ್ 27, 2021
ಮತ್ತೇನಿಲ್ಲ…
ಚಪ್ಪಲಿಗಾಲಿಗೆ ಅಂಟಿದ ಕೆಸರ
ಹಸಿರು ಹುಲ್ಲಿಗೆ ಉಜ್ಜಿ
ನಡೆದು ಬಿಡುವಂತೆ
ಉಂಡು ‘ತಟ್ಟೆಯಲ್ಲಿ ಕೈ ತೊಳೆಯಬಾರದು’ ಬೋರ್ಡ್ ನೋಡಿ
ಸಿಂಕಲ್ ತೊಳೆದು ಟಿಷ್ಯೂ ಪೇಪರಿಂದ ಒರೆಸಿ
ಎಸೆದು ಸಾಗುವಂತೆ
ಸಲೀಸಾಗಿ ಎದೆಗೂಡಲಿ ಗಿರಕಿಯಾಡೋ
ಅಗಣ ತ ಮಾತುಗಳ ತುಟಿ
ದಡಕೆ ತಂದು ಒಗೆಯಬಹುದೇ?
ಮತ್ತೇನಿಲ್ಲ,
ಪಾಟಲಿ ಮೈನೆರೆದ ಹೂವಿನ ಸುತ್ತಾ ನರಳುವ ಹುಳ
ಬಿದ್ದ ಎಲೆಗಳ ಕಿತ್ತು ತೆಗೆವಂತೆ,
‘ಅಹಿಂಸಾ ಪರಮೋ ಧರ್ಮ’ ಅನ್ನುತ್ತಲೇ
ಬಚ್ಚಲೊಳಗೆ, ಅಡಿಗೆ ಮನೆಯಲ್ಲಿ ಗಸ್ತು ತಿರುಗುವ ಜಿರಲೆಗಳಿಗೆ
ಲಕ್ಷ್ಮಣ ರೇಖೆ ಎಳೆವಷ್ಟು
ಸುಲಭವಾಗಿ
ಬೇಡದ ನೂರು ಮಾತುಗಳಿಗೆ ಮುಕ್ತಿಕೊಡಲಾದೀತೇ?
ಮತ್ತೇನಿಲ್ಲ
ಮುಖಕ್ಕೆ ಎಷ್ಟೊಂದು ಕ್ರೀಮುಗಳು
ನೀರು ಚಿಮುಕಿಸುವವರೆಗೂ
ಬಯಲು
ಬೆತ್ತಲಾಗಲು ಅಲ್ಲ… ಗೊತ್ತು
ಬೆತ್ತಲಾಗದೇ ಬಯಲು ದಕ್ಕೀತೇ?
ಮನದ ಅಂದಕ್ಕೆ ಜಾಹೀರಾತಿನ ಅಗತ್ಯವಿದೆ
ಅಹಂ ಬ್ರಹ್ಮಾಸ್ಮಿಗಳ ನಡುವೆ ಬೆವರ ಬಣ್ಣ ಕಾಣುತ್ತಿಲ್ಲ
ನಾಳೆಗಳು ನಮ್ಮವಾದಾವೇನೋ
ಅನ್ನೋದಷ್ಟೇ ಕನಸು
ಕಣ್ತೆರೆದರೆ ಮತ್ತೆ ಕೆಸರ ಕಾಲಿನ ಹೆಜ್ಜೆ ಗುರುತು,
ಟಿಷ್ಯೂ ಪೇಪರಿನುಂಡೆ
ಹುಳ ಹಿಡಿದ ಎಲೆ, ಕಾಡೋ ಜಿರಲೆ
ಬೆತ್ತಲೆಯೂ ಮೀರಿದ ಮಾತುಗಳ
ನರ್ತನ;
ಮತ್ತೇನಿಲ್ಲ… ಖಾಲಿ ಖಾಲಿ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ