ಇತ್ತೀಚಿನ ಬರಹಗಳು: ರೇವಣಸಿದ್ದಪ್ಪ ಜಿ.ಆರ್. (ಎಲ್ಲವನ್ನು ಓದಿ)
- ಪ್ರಕೃತಿ - ಅಕ್ಟೋಬರ್ 11, 2022
- ತ್ರಿಶಂಕು - ಆಗಸ್ಟ್ 21, 2022
- ಬಿಟ್ಟು ಬಂದ ಊರು - ಮೇ 28, 2022
ಕಲ್ಲಾಗಿದ್ದರೆ,
ಶಿಲ್ಪಿಯ ಚಾಣಕ್ಕೆ ಸಿಲುಕಿ
ಶಿಲ್ಪವಾಗಿ ರಸಿಕ ಕಂಗಳಿಗೆ
ಹಬ್ಬವಾಗಬಹುದಿತ್ತು;
ಯಾರದೋ ಮನೆಯ ಬುನಾದಿಯಲಿ
ಎದೆಯೊಡ್ಡಿ ನಿಲ್ಲಬಹುದಿತ್ತು.
ಮಣ್ಣಾಗಿದ್ದರೆ,
ಫಸಲಿಗೆ ಫಲವತ್ತತೆಯ ನೀಡಬಹುದಿತ್ತು;
ಭವದ ಬದುಕು ಮುಗಿಸಿ ಬಂದವರ
ಎರಕದಿಂದಾಲಿಂಗನ ಪಡೆಯಬಹುದಿತ್ತು.
ವಾಯುವಾಗಿದ್ದರೆ,
ಸುಳಿಗಾಳಿಯಾಗಿ ಸುತ್ತಿ
ನೊಂದವರ ಬೆಂದವರ ಒಡಲಿಗೆ
ತಂಪೆರೆಯಬಹುದಿತ್ತು;
ಪ್ರಾಣಿಕೋಟಿಗೆ ಪ್ರಾಣವಾಯುವ ನೀಡಿ
ಕೃತಾರ್ಥನಾಗಬಹುದಿತ್ತು.
ಮೇಘವಾಗಿದ್ದರೋ ಕರಗಿ
ದಾಹದಿ ತುಡಿಯುವ ಧಾತ್ರಿಯ
ತಣಿಸಬಹುದಿತ್ತು;
ನೇಗಿಲಯೋಗಿಯ ಬೆವರಿಗೆ
ತಕ್ಕಫಲ ನೀಡಬಹುದಿತ್ತು.
ಮನುಜನಾಗಿ
ಭವ ಸಂಕಷ್ಟದೊಳು ಸಿಲುಕಿ
ನಿರ್ದಯೆ, ನಿಷ್ಕರುಣೆ,ನಿಷ್ಕಾರಣಗಳ
ಜಗದಿ ಬೇರೂರದೆ,
ಮಾನವೀಯ ಔನತ್ಯಕ್ಕೆ
ಚಿಗುರಲೂ ಆಗದೆ
ತ್ರಿಶಂಕುವಾಗಿರುವೆ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ