ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾಲ ಅನ್ನುವುದೂ ಎಂದೂ ಮುಗಿಯದ,ಆದಿ, ಅಂತ್ಯಗಳಿಲ್ಲದ ವಿಸ್ಮಯದ ಪ್ರವಾಹ.. ದೀಪಕ್ ಮೇಟಿಯವರು ಬರೆದ ಈ ಚಿಕ್ಕ ಕವಿತೆಯಲ್ಲಿ ಸಾಕಷ್ಟು ಕಾಲ ಬೇಡುವ ಅರ್ಥ ಭರಿತ ಸಾಲುಗಳದೇ ದೊಡ್ಡ ದೊಡ್ಡ ಪಾಲುಗಳು..!
ದೀಪಕ್ ಮೇಟಿ
ಇತ್ತೀಚಿನ ಬರಹಗಳು: ದೀಪಕ್ ಮೇಟಿ (ಎಲ್ಲವನ್ನು ಓದಿ)

ಕಾಲ ಅನ್ನುವುದೂ ಎಂದೂ ಮುಗಿಯದ,ಆದಿ, ಅಂತ್ಯಗಳಿಲ್ಲದ
ವಿಸ್ಮಯದ ಪ್ರವಾಹ.. ದೀಪಕ್ ಮೇಟಿಯವರು ಬರೆದ ಈ ಚಿಕ್ಕ ಕವಿತೆಯಲ್ಲಿ ಸಾಕಷ್ಟು ಕಾಲ ಬೇಡುವ ಅರ್ಥ ಭರಿತ ಸಾಲುಗಳದೇ ದೊಡ್ಡ ದೊಡ್ಡ ಪಾಲುಗಳು..!

ಸಂಪಾದಕ

ಕಾಲ ದಣಿವರಿಯದ
ಚಲನಶೀಲ ಬಹುರೂಪಿ
ಭೂತ, ವರ್ತಮಾನ, ಭವಿಷ್ಯಗಳ
ಒಮ್ಮೆಲೇ ತೋರಿಸೋ ಬ್ರಹ್ಮಾಂಡ ಸ್ವರೂಪಿ

ವರ್ತಮಾನ
ಕ್ಷಣ ಕ್ಷಣಕೂ ಭೂತವಾಗುತ
ಮನದೊಳಗೆ
ಭೂಗತ ಆಗುತಿದೆ

ಭೂತಕಾಲದ ಭೂತ
ಗಳಿ ಗಳಿಗೆಗೂ ಬೆಳೆಯುತ
ಭವಿತವ್ಯದ ನಡಿಗೆಗೆ
ಹೆಗಲ ಹೊರೆಯಾಗುತಿದೆ

ಮಲಗಿದಾಗ ಮರಣಿಸಿ
ಎದ್ದಾಗ ಹುಟ್ಟಿದರೆ ಹೊರೆಯೆಲ್ಲಿ?
ಜೀವಿಗೆ ಸಾವಿನ ಭಯ,
ಸಾವಿಲ್ಲದೆ ಮರು ಹುಟ್ಟಿಲ್ಲ