- ವಿಂಗಡಿಸಿ ನೋಡು - ಅಕ್ಟೋಬರ್ 23, 2022
- ಆ ರಾತ್ರಿ - ಸೆಪ್ಟೆಂಬರ್ 15, 2021
- ಪ್ರಮಾಣ - ಸೆಪ್ಟೆಂಬರ್ 5, 2021
ಹಗಲ ಉತ್ತರಗಳೇ
ನೂತನ ದೋಶೆಟ್ಟಿ ಅವರ ‘ಸಂಚುಗಾರ ರಾತ್ರಿ’ ಕವಿತೆಯಿಂದ
ಪ್ರಶ್ನೆಗಳಾಗಿರುವಾಗ
ಇರುಳಲ್ಲೂ ಸಂಚುಗಳು…!
ಹೊತ್ತೆಲ್ಲ ಕರಗಿ ಕಾವಳ
ಗುಂಡಿಗೆಯ ಗಡಿಯಾರ
ಟಕ್ ಟಕಿಸುತ್ತ
ಜೊಂಪು ಹತ್ತಿಸಲು ಲಾಲಿ ಹಾಡಿದರೂ
ಮಗ್ಗಲು ಮುರಿದಷ್ಟೂ
ಅಸಹನೆಯ ಬೇನೆ
ಗಂಟೆಗಳೇ ಕಳೆಯುವಾಗ
ನಿಮಿಷಗಳದ್ದು ಜಾರು ಹಾದಿ
ಎಂದೋ ತಂದಿಟ್ಟ
ಹೊರಳದೇ ಕುಳಿತ ಪುಸ್ತಕ
ಅಕ್ಷರಗಳೇ ಮುನಿಸಿಕೊಂಡಿರುವಾಗ
ಹಾಳೆಗಳು ಸರಿಯವು
ಫೇಸ್ ಬುಕ್ ಪೇಜು
ಬೆರಳ ತುದಿಯಲ್ಲಿ
ಸರಾಗವಾಗಿ ಜಾರಿ
ಅಪರಾತ್ರಿಯಲ್ಲಿ ಲೈಕು, ಕಮೆಂಟುಗಳ ಸಾಥು
ಫೊಟೊ,, ಅಡುಗೆ,
ಹಾಡು,ಕತೆ, ಕವಿತೆ,
ರಂಗೋಲಿ,ಚಿತ್ತಾರ,ಚಿತ್ರಕಲೆ,
ಕುಣಿತ, ಕೈದೋಟ
ದಿನವಿಡೀ ದಣಿವು
ವಾಟ್ಸ್ ಆ್ಯಪ್ ಚಾಟಿಂಗಿನ ಚಾಟಿ
ಏಟಿನ ನೋವು
ಮುಸಿ, ಮುಸಿ, ಗುಸು, ಗುಸ
ಪಕ್ಕದ ಗೊರಕೆಗೂ ಅನುಮಾನ
ಹಾಳಾದ್ದು
ಹೊತ್ತು ಗೊತ್ತಿಲ್ಲದ ಅನಾಥ ಪ್ರಜ್ಞೆ
ಹತ್ತಿರದಲ್ಲೇ ಊಳಿಡುವ ನಾಯಿ
ಬೆದರಿಸಲು ಹೊಂಚಿದ ರಾತ್ರಿ
ಹಗಲ ಉತ್ತರಗಳೇ
ಪ್ರಶ್ನೆಗಳಾಗಿರುವಾಗ
ಇರುಳಲ್ಲೂ ಸಂಚುಗಳು
ಕ್ಷಣ ಕ್ಷಣ ಬದುಕ ಪಗಡೆ
ದಿನರಾತ್ರಿ ದಾಳಗಳ ಉರುಳಾಟ
ಸಮ ಬೆಸಗಳ ಚಲನೆಯಲ್ಲಿ
ಕೊನೆಗೆ ಹಣ್ಣೋ ಕಾಯೋ
ಮುಖ ತೊಳೆದು ಬಂದ ಬೆಳಕು
ನಿನ್ನ ಸರದಿ ಎಂದಿತು.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ