- ಗುಂಪಿನಲ್ಲಿ ಗಾಂಪರಾಗುವ ಮನಸ್ಥಿತಿ - ಅಕ್ಟೋಬರ್ 30, 2024
- ಕಾನ್ ಬಾನ್ - ನವೆಂಬರ್ 12, 2020
- ನಾಳೆ ಶನಿವಾರ…! - ಸೆಪ್ಟೆಂಬರ್ 18, 2020
ಭೂಮಿಗೆ ಗಾಯವಾದಿತು
ಮೊನ್ನೆ ಮೊನ್ನೆ ನಡೆದ ಉತ್ಖನನದಲ್ಲಿ
ಪುಷ್ಕರಣಿ ಸಿಕ್ಕಿದೆಯಂತೆ..
ಆ ಪುಷ್ಕರಣಿಯ ಆಳ,ಅಗಲ ಮತ್ತು ಉದ್ದ
ಮತ್ತೊಮ್ಮೆ ಅಗೆ ಅಗೆದು,
ಆಳೆತ್ತರದ ಮಣ್ಣನ್ನು ಬಗೆದು ಹಾಕಿದ್ದಾರೆ.
ಅಲ್ಲಿ ಅಗೆಯುವಾಗಲೊಮ್ಮೆ ಸಿಗುತಿವೆ,
ಲೋಹದ ಚೂರು, ಭಗ್ನ ಮೂರ್ತಿಗಳು.
ಸಿಕ್ಕ ಪ್ರತಿ ವಸ್ತುವಿಗೂ ಘನ ವಿಶ್ಲೇಷಣೆ,
ಅಪರಿಮಿತ ವಿವರಣೆ!
ಹಾಗೆಯೆ ಅಗೆಯುವಾಗಲೊಮ್ಮೆ ಸಿಕ್ಕಿತಂತೆ
ತುಂಡರಿಸಿದ ಬೆಳ್ಳಿ ಕಾಲ್ಗೆಜ್ಜೆ ಮತ್ತು ಕಿವಿಯ ಜುಮ್ಕಿ
ಯಾವ ರಾಣಿಯ ಕಾಲ್ಗೆಜ್ಜೆ ಮತ್ತು ಜುಮ್ಕಿ?
ಹಾಳು ಕಾಲ ಗರ್ಭದಲ್ಲಿ ಹೂತು ಹೋಗಿವೆ
ದೌಲತ್ತು ದರಬಾರಿನ ಪ್ರಕರಣಗಳು,
ಒಮ್ಮೆಲೆ ಎಲ್ಲಾ ಒಳಕೋಣೆಯಿಂದ ಪಡಸಾಲೆಗೆ ಬಂದು
ಸುರಗಿಗಾಗಿ ಕಾದು ನಿಂತವು!!!
ಅಧ್ಯಯನ ಹೇಳಿದೆಯೆಂತೆ ಆ ಕಾಲ್ಗೆಜ್ಜೆ ಮತ್ತು ಜುಮ್ಕಿ
ಶತಮಾನಗಳಷ್ಟು ಹಳೆಯದಲ್ಲವೆಂದು!!
ನಿನ್ನೆಯೋ ಮೊನ್ನೆಯೋ ಹೂತು ಹೋದ ವಸ್ತುಗಳವಂತೆ!
ಹಾಗಾಗಿ ಅದ್ಯಾವ ರಾಣಿಯ ಆಭರಣಗಳಲ್ಲವೆಂದು ತಿಳಿಸಿದಂತಾಯಿತು.
ನನಗೆ ಗೊತ್ತಿತ್ತು ಅದಾರಾದೆಂದು?
ಮೌನದಲೆ ಊಹಿಸಿದ್ದೆ ಮಳೆ ಹನಿಗಳಣೆಸುತ!!
ಕೊನೆಗೆ ಇನ್ನು ಆಗದು ಎಂದು
ಪತ್ರ ಬರೆದಿರುವೆ ಪುರಾತತ್ವ ಇಲಾಖೆಗೆ
“ಇನ್ನು ಮುಂದೆ ಅಗೆಯದಿರಿ: ಭೂಮಿಗೆ ಗಾಯವಾದೀತು” ಎಂದು…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ