- ಕವಿಯೊಬ್ಬ.. - ಅಕ್ಟೋಬರ್ 23, 2022
- ನನಗೆ ಬೇಕು ನನ್ನ ಪಾಡಿಗಿರುವ ಸ್ವಾತಂತ್ರ್ಯ .. - ಮೇ 28, 2022
- ಶೆಲ್ಲಿಯ ಒಂದು ಕವಿತೆಯ ಅನುವಾದ - ಸೆಪ್ಟೆಂಬರ್ 27, 2020
ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ
ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ
ರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿ
ಗಾಳಿ ಮೆಲ್ಲಗುಸಿರಾಡುತ್ತಿರುವಾಗ
ತಾರೆಗಳು ಜ್ವಲಿಸಿ ಹೊಳೆಯುವಾಗ
ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ
ಮತ್ತು ನನ್ನ ಹೆಜ್ಜೆಗಳಲೊಬ್ಬ ಯಕ್ಷ
ನನ್ನನ್ನೊಯ್ಯುತ್ತಾನೆ-ಯಾರಿಗೆ ಗೊತ್ತು ಹೇಗೆಂದು:
ನಿನ್ನ ನೋಟದ ಕಿಟಕಿ, ನೀನೆಂಬ ಸಿಹಿ
ಅಲೆವ ಗಾಳಿಗಳು ಸದ್ದಡಗಿ ಸ್ತಬ್ಧವಾಗುತ್ತವೆ
ಕಾಳ ರಾತ್ರಿಯ ನೀರವ ಮೌನದಲ್ಲಿ
ಸವಿ ಭಾವಗಳು ಅಳಿಸಿಹೋಗುತ್ತವೆ ಚಂಪಕ
ಪುಷ್ಪದ ಸುಗಂಧ ಇಲ್ಲವಾಗುವಂತೆ
ತಾ ನಿನಗೆ ಆತ್ಮವನ್ನರ್ಪಿಸುವೆನೆಂದು
ಸುಸ್ವರದ ಕೋಗಿಲೆ ದೂರಿಡುತ್ತಿದೆ :
ಓ ನಲ್ಲೆ ಹಾಗಿರುವೆ ನೀನು
ನೆಲಕಚ್ಚಿರುವ ನನ್ನನ್ನೆತ್ತರಿಸಿ ನಿಲ್ಲಿಸು ಓ ನಲವೇ
ನಾನು ಸಾಯುವೆ ಎದೆಗೆಡುವೆ
ನಾನು ಸೋತುಬಿಡುವೆ
ನಿನ್ನ ಚುಂಬನ ವರ್ಷಿಸಲಿ :
ನನ್ನ ಒಣ ತುಟಿಗಳನ್ನು ಕಣ್ಣ ಹುಬ್ಬುಗಳನ್ನು
ನನ್ನ ಬಿಳಿಚಿಕೊಂಡ ಶೀತಲ ಕೆನ್ನೆಗಳನ್ನು ..
ಅಯ್ಯೋ ಬಡಿದುಕೊಳ್ಳುತ್ತಿದೆ ಎದೆ ಆವೇಗದಿಂದ
ನಿನ್ನೆದೆಗೊತ್ತಿಕೋ ಅಲ್ಲೇ ಅದು ಸ್ತಬ್ಧಗೊಳ್ಳಲಿ
ಮೂಲ: ಪಿ ಬಿ ಶೆಲ್ಲಿ
ಅನುವಾದ: ಡಾ.ಕೆ ಪಿ ನಟರಾಜ
I Arise From Dreams Of Thee
I arise from dreams of thee
In the first sweet sleep of night,
When the winds are breathing low,
And the stars are shining bright
I arise from dreams of thee,
And a spirit in my feet
Has led me – who knows how? –
To thy chamber-window, sweet!
The wandering airs they faint
On the dark, the silent stream, –
The champak odors fall
Like sweet thoughts in a dream,
The nightingale’s complaint,
It dies upon her heart,
As I must die on thine,
O, beloved as thou art!
O, lift me from the grass!
I die, I faint, I fall!
Let thy love in kisses rain
On my lips and eyelids pale,
My cheek is cold and white, alas!
My Heart beats loud and fast
Oh! press it close to thine again,
Where it will break at last!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ