ಎಚ್ ಡುಂಡಿರಾಜ್
ಕನ್ನಡ ಸಾರಸ್ವತ ಲೋಕದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಗಹನವಾದ ವಿಷಯ, ಬದುಕಿನ ವಿನೋದಗಳು, ನವಿರು ಹಾಸ್ಯ ಇವರ ಸಾಹಿತ್ಯದಲ್ಲಿ ಬೆರೆತು, ಹೊಸ ಪಾಕವೇ ಸಿದ್ಧವಾಗುತ್ತದೆ. ಹನಿಗವನಗಳ ರಾಜ, ಚುಟುಕು ಚಕ್ರವರ್ತಿ ಎಂದೇ ಜನಪ್ರಿಯರಾಗಿರುವ ಇವರು ಗದ್ಯ ಸಾಹಿತ್ಯದಲ್ಲೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಈವರೆಗೆ ಸುಮಾರು ೫೭ ಕೃತಿಗಳು ಪ್ರಕಟವಾಗಿವೆ. ೫೩೦ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ವಿಜಯಕರ್ನಾಟಕ, ಪ್ರಜಾವಾಣಿ, ಕಸ್ತೂರಿ, ತುಷಾರ, ವಿಜಯವಾಣಿ ಹಾಗೂ ಉದಯವಾಣಿ ಪತ್ರಿಕೆಗಳಿಗೆ ಬರೆದಿರುವ ಇವರು ಅಂಕಣಕಾರರಾಗಿಯೂ ಪ್ರಸಿದ್ಧರು.
ಹಲವುನಾಟಕಗಳಿಗೆ, ನಕ್ಕಳಾರಾಜಕುಮಾರಿ, ಕೋತಿಗಳುಸಾರ್ಕೋತಿಗಳು, ನಿಂಬೆಹುಳಿ ಹಾಗೂ ಹಾರುವ ಹಂಸಗಳು ಚಲನಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಭಾವಗೀತೆಗಳಿಗೆ ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ಬಿ.ವಿ.ಕಾರಂತ್, ಉಪಾಸನಾ ಮೋಹನ್, ಮನೋರಂಜನ್ ಪ್ರಭಾಕರ್, ವಿ. ಮನೋಹರ್, ಬಿ.ವಿ.ಶ್ರೀನಿವಾಸ್ ಮುಂತಾದವರು ರಾಗ ಸಂಯೋಜನೆ ಮಾಡಿದ್ದಾರೆ. ನಾಡಿನ ಖ್ಯಾತ ಗಾಯಕ ಗಾಯಕಿಯರು ಹಾಡಿರುವ ಈ ಗೀತೆಗಳ ಧ್ವನಿಮುದ್ರಿಕೆಗಳು ಜನಪ್ರಿಯವಾಗಿವೆ.
ಹನಿಗವನ ಸಂಕಲನಗಳು:
ಪಾಡ್ಯ ಬಿದಿಗೆ ತದಿಗೆ (೧೯೮೫), ನವನೀತ (೧೯೯೧), ನೂರು ಹನಿಗವನಗಳು (೧೯೯೨), ಇನ್ನೂರು ಹನಿಗವನಗಳು (೧೯೯೫), ಪಂಚ್ಕಜಾಯ (೧೯೯೭), ಹನಿಕೇತನ (೧೯೯೯), ಅಳಿಲು ಸೇವೆ (೨೦೦೦), ಹನಿ ಖಜಾನೆ (೨೦೦೦) (ಇದುವರೆಗಿನ ಹನಿ ಗವನಗಳು), ಹನಿ ಹನಿ ಪ್ರೀತಿ (೨೦೦೯) (ಆಯ್ದ ಹನಿಗವನಗಳು),ಹನಿ ಹನಿ ಹಾಸ್ಯ (೨೦೦೯) (ಆಯ್ದ ಹನಿಗವನಗಳು), ಹನಿಗಣಿ (೨೦೧೦), ಹನಿಗಾರಿಕೆ (೨೦೧೨), ಹನಿ ದರ್ಶಿನಿ (೨೦೧೩), ಹನಿ ವಾಹಿನಿ (೨೦೧೪), ಹನಿ ಮೋಹಿನಿ(೨೦೧೫), ಪಂಚ್ನಾಮಾ (೨೦೧೮), ಮಿನಿ ಮಿನುಗು(೨೦೧೯), ಕರೊನಾರೀ ಸಹೋದರ(೨೦೨೦) ಇತ್ಯಾದಿ.
ಕವನ ಸಂಕಲನಗಳು:
ನಮ್ಮ ಗೋಡೆಯ ಹಾಡು (೧೯೮೨), ನೀನಿಲ್ಲದೆ (೧೯೮೬), ನನ್ನ ಕವಿತೆ ನನ್ನ ಹಾಗೆ (೧೯೯೨), ಅಕ್ಷತಾ-ಲಕ್ಷತಾ (೨೦೦೪), ಏನಾಯಿತು (೧೯೯೯), ಇಂಚರ ಬಂದಳು ಇಂಚರ (ಮಕ್ಕಳಕವಿತೆಗಳು) (೨೦೧೩), ಕನಕನ ಕಿಂಡಿ (೨೦೧೭), ಲಾಲಿ ಪಾಪು ಚೀಪು ಚೀಪು (೨೦೨೦) (ಮಕ್ಕಳಕವನಗಳ ಇ-ಪುಸ್ತಕ ಮತ್ತು ಆಡಿಯೋ ಪುಸ್ತಕ) ಇತ್ಯಾದಿ.
ಪ್ರಬಂಧ/ ಅಂಕಣ ಬರಹಗಳ ಸಂಗ್ರಹ:
ಯಾರಿಗೂ ಹೇಳ್ಬೇಡಿ (೨೦೦೦), ಮಾತು ಕ(ವಿ)ತೆ (೨೦೦೫), ಮತ್ತಷ್ಟುಮಾತು-ಕ(ವಿ)ತೆ (೨೦೦೬), ಪರವಾಗಿಲ್ಲ (೨೦೦೭), ಬಾರಯ್ಯ ಲಂಬೋದರ (೨೦೦೮), ಟೈಮಿಲ್ಲ ಸಾರ್ ಟೈಮಿಲ್ಲ(೨೦೦೮), ಡುಂಡಿಮ (೨೦೧೦), ಕಾರ್ಡಿದ್ರೆ ಕೈಲಾಸ (೨೦೧೧), ಡುಂಡಿ ನಗೆ ಬಂಡಿ (ಆಯ್ದನಗೆಬರಹಗಳು) (೨೦೧೩), ಅನಿವಾಸಿಗಳೇ ವಾಸಿ(ಪ್ರವಾಸಕಥನ) (೨೦೧೩), ಬೋಳಾಯ ತಸ್ಮೈ ನಮಃ (೨೦೧೫), ನೊಣಾನುಬಂಧ (೨೦೧೮), ಕರೆಗಳು ಸಾರ್ ಕರೆಗಳು (೨೦೧೯), ಕಾಯುವಕಾಯಕ (೨೦೧೯)
ನಾಟಕಗಳು:
ಓಡುವವರು(೧೯೮೧), ಹುಡುಕಾಟ(೧೯೮೫), ಅಧ್ವಾನಪುರ(೧೯೮೯), ಕೊರಿಯಪ್ಪನ ಕೊರಿಯೋಗ್ರಫಿ (ಎರಡುನಾಟಕಗಳು) (೧೯೯೧), ಅಜ್ಜಿಕತೆ (ಮಕ್ಕಳನಾಟಕ) (೧೯೯೪), ಸಿನಿಮಹಾತ್ಮೆ (ಮೂರುನಾಟಕಗಳು) (೧೯೯೬), ಕಾಯೋಕಲ್ಪ ಮತ್ತು ಇತರ ನಾಟಕಗಳು (೨೦೦೩), ಇಪ್ಪತ್ತೊಂದರೆಶತಮಾನ (೨೦೦೩), ಮಗು ಕಳೆದು ಹೋಗಿದೆ (೨೦೦೬), ಪುಕ್ಕಟೆ ಸಲಹೆ (೨೦೧೧)
ಪ್ರಶಸ್ತಿ, ಗೌರವಗಳು :
ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ(೨೦೦೬), ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ(೧೯೯೪), ಕಡೆಂಗೋಡ್ಲು ಕಾವ್ಯ ಪ್ರಶಸ್ತಿ(೧೯೮೨), ಮುದ್ದಣ ಕಾವ್ಯ ರಾಜ್ಯಪ್ರಶಸ್ತಿ(೧೯೮೫), ಚುಟುಕು ಸಾರ್ವಭೌಮ ಪ್ರಶಸ್ತಿ(೨೦೦೮), ದುಬೈನಲ್ಲಿ ನಡೆದ ಪ್ರಥಮ ಯು.ಎ.ಇ. ಚುಟುಕು ಸಮ್ಮೇಳನದ ಅಧ್ಯಕ್ಷತೆ (೨೦೧೧) ಇತ್ಯಾದಿ.