ಊರಿನಿಂದ ಹೊರಟು ಮುಂಬೈಗೆ ರೈಲು ಹಿಡಿಯುವಾಗ ನನ್ನ ತಲೆ ತುಂಬಾ ನವ್ಯ ಧಾಟಿಯ ಚಿತ್ರವೊಂದು ಮೈತಳೆದು ನನ್ನನ್ನೇ ಆವರಿಸತೊಡಗಿ, ಮಾದಿಯ ಮನಸ್ಸಿನಲ್ಲಿರುವುದಾದರೂ ಏನು? ಈ ರೀತಿ ಹುಚ್ಚು ಕೆರಳುವ ಕಾರಣವಾದರೂ ಏನು ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಶೈಲಾಳ ಮದುವೆಗೆಂದು ಊರಿಗೆ ಹೋಗುವ ತನಕ ಉತ್ತರಿಸಲಾಗದ ಪ್ರಶ್ನೆಗಳಿಗೆ ಉತ್ತರವೆಂಬಂತೆ ಆಘಾತವನ್ನುಂಟು ಮಾಡುವ ಸತ್ಯ ಸಂಗತಿ ನನ್ನೆದುರಿಗಿತ್ತು.
ಮಾದಿಯದು ಕಥೆಯನ್ನಲೇ…. ಜಯಲಕ್ಷ್ಮಿ ಪಾಟೀಲ್ ರ ಕಥೆಯಿಂದ
ಕಸ್ತೂರಿ ಪರಿಮಳದ ಕನ್ನಡ ಪುರವಣಿ