ಜಯಶ್ರೀ ದೇಶಪಾಂಡೆ
ಜಯಶ್ರೀ ದೇಶಪಾಂಡೆ ಅವರು ಉತ್ತರ ಕರ್ನಾಟಕದ ವಿಜಯಪುರದವರು.
ಚಿಕ್ಕಂದಿನಲ್ಲಿಯೇ ಸಾಹಿತ್ಯದ ಕಡೆ ಒಲವಿದ್ದ ಜಯಶ್ರೀ ಅವರು ಮನಃಶಾಸ್ತ್ರ ಹಾಗೂ ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವೀಧರರು.
ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ, ಉತ್ತರಾರ್ಧ ಎಂಬ ೫ ಕಥಾ ಸಂಕಲನಗಳು, 'ಯತ್ಕಿಂಚಿತ್' ಎಂಬ ಕಾವ್ಯ ಸಂಕಲನ, 'ಮಾಯಿ ಕೆಂದಾಯಿ ಸ್ಮೃತಿ ಲಹರಿ' ಮತ್ತು 'ಹೌದದ್ದು ಅಲ್ಲ ಅಲ್ಲದ್ದು ಹೌದು' , 'ನೋಟ್ ಬುಕ‍್ನ ಕಡೆಯ ಪುಟ' ಎಂಬ ಲಲಿತ ಪ್ರಬಂಧ ಸಂಕಲನಗಳು, 'ಹಲವು ನಾಡು ಹೆಜ್ಜೆ ಪಾಡು' ಅನ್ನುವ ಪ್ರವಾಸಾನುಭವ ಕಥನವನ್ನೂ ಬರೆದಿದ್ದಾರೆ.
'ಯತ್ಕಿಂಚಿತ್' ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, 'ಹೌದದ್ದು ಅಲ್ಲ ಅಲ್ಲದ್ದು ಹೌದು' ಲಲಿತ ಪ್ರಬಂಧ ಸಂಕಲನಕ್ಕೆ ಅತ್ತಿಮಬ್ಬೆ ಪ್ರಶಸ್ತಿ, 'ಸ್ಥವಿರ ಜಂಗಮಗಳಾಚೆ' ಕಥಾ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ 'ಸುಧಾ ಮೂರ್ತಿ ತ್ರಿವೇಣಿ ಸಾಹಿತ್ಯ ಪ್ರಶಸ್ತಿ', 'ಮೂರನೆಯ ಹೆಜ್ಜೆ' ಕಥಾಸಂಕಲನಕ್ಕೆ ಗೊರೂರು ಪ್ರತಿಷ್ಠಾನದ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ, ದಿ| ಸಿ ಎನ್ ಜಯಲಕ್ಷ್ಮೀದೇವಿ ಸ್ಮಾರಕ ಕಥಾಪ್ರಶಸ್ತಿ, ಬೆಳಗಾಂವಕರ್ ನಾಸು ಅವರ 'ಕಾದಂಬರಿ ಸುನಂದಾ' ಕರಿತಾದ ವಿಮರ್ಶೆಗೆ ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ