ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರತ್ನಾ ಮೂರ್ತಿ

‘ರತ್ನಾ ಮೂರ್ತಿ’ ಎಂದೇ ಸಾಹಿತ್ಯ ಹಾಗೂ ಗಮಕ ವಲಯದಲ್ಲಿ ಖ್ಯಾತರಾಗಿರುವ ಎಸ್. ಎಂ. ನಾಗರತ್ನ, ಬೆಂಗಳೂರಿನ ಸುಪ್ರಸಿದ್ಧ ಬಿಷಪ್ ಕಾಟನ್ ಬಾಲಕಿಯರ ಶಾಲೆಯ ವಿಶ್ರಾಂತ ಶಿಕ್ಷಕಿ. ಪ್ರಸಿದ್ಧ ಸಾಹಿತಿಯಾಗಿ, ಕವಿಯಾಗಿ, ಉತ್ತಮ ವ್ಯಾಖ್ಯಾನಕಾರರೂ ಪ್ರವಚನಕಾರರೂ ಆಗಿರುವ ರತ್ನಾ ಮೂರ್ತಿಯವರ ವ್ಯಾಖ್ಯಾನ ಹಾಗು ಉಪನ್ಯಾಸಗಳು ನಾಡಿನಾದ್ಯಂತ ನಡೆಯುತ್ತಿರುತ್ತವೆ.

‘ಮುಂಡಿಗೆ’ ಎಂಬುದು ದಾಸಸಾಹಿತ್ಯದ ಸಂದರ್ಭದಲ್ಲಿ ಮೂಡಿದ ಸುಲಭವಾಗಿ ಬಿಡಿಸಲಾಗದ ಒಗಟಿನಂತಹ ರಚನೆಗಳು. ಬಿಗಿಯಾಗಿ ಹಿಡಿದ ಮುಷ್ಟಿಕೆಯಲ್ಲಿನ ಪದಾರ್ಥವನ್ನು ಬಿಡಿಸಿಕೊಳ್ಳಲು ಹೇಗೆ ಸುಲಭವಲ್ಲವೋ ಹಾಗೆಯೇ ಮುಂಡಿಗೆಗಳ ಹೂರಣವನ್ನು ಹೊರತೆಗೆಯುವುದು ಅಷ್ಟೇ ಕಷ್ಟಸಾಧ್ಯ.