ಶೈಲಜಾ ಹೆಗಡೆ
ಮುಂಬಯಿ ವಿಶ್ವ ವಿದ್ಯಾಲಯದಲ್ಲಿ ದಶಕಗಳಿಂದ ಸಾಹಿತ್ಯಾಧ್ಯಯನ ರತರಾಗಿದ್ದಾರೆ. ಮುಂಬಯಿ ವಿಶ್ವ ವಿದ್ಯಾಲಯ ಸಂಸ್ಕøತ ವಿಭಾಗದಿಂದ ಎಂ.ಎ ಮಾಡಿದ ಇವರು ನಂತರ ಕನ್ನಡ ವಿಭಾಗದಿಂದ ಎಂ.ಎ, ಎಂ.ಫಿಲ್
ಪದವಿ ಪಡೆದು, ಇದೀಗ “ಮುಂಬೈ ಕನ್ನಡ ಕಾವ್ಯ ಒಂದು ಅಧ್ಯಯನ” ಎಂಬ ವಿಷಯದ ಕುರಿತು ಪಿ.ಎಚ್‍ಡಿ ಅಧ್ಯಯನ ನಡೆಸುತ್ತಿದ್ದಾರೆ.
“ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು” ಇವರ ಸಂಪ್ರಬಂಧ ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು ಸಂಸ್ಕೃತಿ ಇಲಾಖೆ ಹಾಗೂ ಮಾನಸ ಗಂಗೋತ್ರಿಯ ಆಯ್ಕೆಯ ಪುಸ್ತಕಗಳಲ್ಲಿ ಸ್ಥಾನ ಗಳಿಸಿದೆ.
ಹತ್ತು ವರ್ಷಗಳಿಂದ ಮಹಾರಾಷ್ಟ್ರ ಬೋರ್ಡ್ ಹಾಗೂ ಸಿ.ಬಿ.ಎಸ್.ಸಿ ಮಕ್ಕಳಿಗೆ ಸಂಸ್ಕøತ ಪಾಠ ಮಾಡಿದ್ದಲ್ಲದೆ, ಕನ್ನಡೇತರರಿಗೆ ಕನ್ನಡ
ಕಲಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬರವಣಿಗೆ, ಗಾಯನ, ಚಿತ್ರಕಲೆ, ಯಕ್ಷಗಾನ ಇವರ ಆಸಕ್ತಿಯ ವಿಷಯಗಳು. ಇವರ ಅನೇಕ ಬರೆಹ ಮತ್ತು ಕಾವ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.