ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಮ್ಮಣ್ಣ ಬೀಗಾರ

ಕತೆಗಾರ ತಮ್ಮಣ್ಣ ಬೀಗಾರ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದವರು.ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ. ಮಾತಾಟ ಮಾತೂಟ, ಮರಬಿದ್ದಾಗ, ಎನ್ನುವ ಮಕ್ಕಳಿಗಾಗಿ ಲಲಿತ ಬರಹಗಳನ್ನು, 'ಬಾವಲಿ ಗುಹೆ' - ಮಕ್ಕಳ ಕಾದಂಬರಿ ಹೊರ ತಂದಿದ್ದಾರೆ. ಗುಬ್ಬಚ್ಚಿ ಗೂಡು, ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಸೊನ್ನೆ ರಾಶಿ ಸೊನ್ನೆ, ತೆರೆಯಿರಿ ಕಣ್ಣು ಖುಷಿಯ ಬೀಜ ಹಾಗೂ ಹಾಡಿನ ಹಕ್ಕಿ - ಮಕ್ಕಳ ಕವನ ಸಂಕಲನ. ಮಿಂಚಿನ ಮರಿ - ಶಿಶುಪ್ರಾಸ ಹೊತ್ತಿಗೆ ಕಪ್ಪೆಯ ಪಯಣ, ಜಿಂಕೆಮರಿ, ಹಸಿರೂರಿನ ಹುಡುಗ, ಮಲ್ಕಾಡೆ ಮಾತಾಡು, ಅಮ್ಮನ ಚಿತ್ರ ಪುಟ್ಟನ ಕೋಳಿ - ಮಕ್ಕಳ ಕಥಾ ಸಂಕಲನ.

ಮಕ್ಕಳೆಂದರೆ ಪ್ರೀತಿ, ಮಕ್ಕಳೆಂದರೆ ಚೈತನ್ಯ, ಮಕ್ಕಳೆಂದರೆ ಆಟ, ನಗು, ತಿಂಡಿ, ಮುಗ್ಧತೆ ಎಂದೆಲ್ಲ ಹೇಳುತ್ತ ಹೋಗಬಹುದು. ಹೌದು ಮಕ್ಕಳ ಸಾಂಗತ್ಯವೇ…