ತಿರುಪತಿ ಭಂಗಿ
ಕನ್ನಡದ ಭರವಸೆಯ ಕಥೆಗಾರರಾದ ತಿರುಪತಿ ಭಂಗಿ ಅವರು ಬಾಗಲಕೋಟೆಯ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ವಿದ್ಯಾಗಿರಿ ಬಾಗಲಕೋಟೆಯಲ್ಲಿ ಕನ್ನಡ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು:1) ಜಾತಿ-ಕುಲುಮ್ಯಾಗ ಅರಳಿದಪ್ರೀತಿ 2)ಕೈರೊಟ್ಟಿ 3)ಗಾಂಧಿ ಬಜಾರ್ 4)ಕೆಂಪ್ ರೋಡ್
ಕಾದಂಬರಿ : ಫೋಬಿಯಾ ಕವನ ಸಂಕಲನಗಳು:1)ಅಪ್ಪ
2)ಕವಳೆಗಣ್ಣಿನ ಹುಡುಗಿ ಪ್ರಶಸ್ತಿಗಳು1. ಕೆ. ವಾಸುದೇವಾಚಾರ್ಯರ 2.ಸಮೀರವಾಡಿ ದತ್ತಿ 3.ಬೀಳಗಿ ದತ್ತಿ ಪ್ರಶಸ್ತ 4.ಅಡ್ವೈಸರ್
“……ಭರಮ್ಯಾ ಆ ರಾತ್ರಿ ಎಂದೂ ಮುಗಿಲು ನೋಡಿಯೇ ಇಲ್ಲ, ಅನ್ನುವ ರೀತಿಯಲ್ಲಿ ನೋಡುತ್ತಲಿದ್ದ. ಮುಗಿಲ ತುಂಬ ಚುಕ್ಕಿಗಳು ಕಿಕ್ಕಿರಿದು ಪಳಗುಟ್ಟುತ್ತಿದ್ದವು. ಇವೆಲ್ಲ ಸತ್ತವರ ಕಣ್ಣುಗಳು..! ಇದರಲ್ಲಿ ನಮ್ಮವ್ವನ ಕಣ್ಣುಗಳಾವು? ನಮ್ಮ ಅಪ್ಪನ ಕಣ್ಣುಗಳಾವು? …..”
ಭರಮ್ಯಾ ಎಂಬ ಪಾತ್ರ, ಅದಕ್ಕೆ ತಕ್ಕಂತೆ ಗ್ರಾಮ್ಯತೆಯ ಸೊಗಸು, ಕಲಾತ್ಮಕ ನಿರೂಪಣಾ ಶೈಲಿಯ ಜತೆಗೆ ಎಲ್ಲಿಯೂ ಹಿಡಿತ ತಪ್ಪದೆ, ಭೇಷ್ ಅನ್ನುವಂತೆ ಬರೆಯುತ್ತಾರೆ ಕಥೆಗಾರ ತಿರುಪತಿ ಭಂಗಿಯವರು. ಪೂರ್ತಿಯಾಗಿ ಓದಿಸಿಕೊಂಡು ಹೋಗುವ ಈ ಕಥೆ ನಮ್ಮ ನಸುಕು ಓದುಗರಿಗಾಗಿ….