ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತ್ರಿವೇಣಿ ಜಿ ಎಚ್

ಶ್ರೀಮತಿ ತ್ರಿವೇಣಿ ಜಿ ಎಚ್ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರು. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕಿ. ಕವಿತೆ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದು, ಈ ಕ್ಷೇತ್ರದಲ್ಲಿ ಅವರಿಗೆ ಅತೀವ ಆಸಕ್ತಿ. ಕಾಲೇಜು ದಿನಗಳಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಯುವ ವಾಣಿ ವಿಭಾಗದಲ್ಲಿ ಕವಿತೆಗಳನ್ನು ಓದಿದ್ದಾರೆ. ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಇವರು ೨೦೦೩ರಲ್ಲಿ ನಡೆಸಿದ ಸ್ಪರ್ಧೆಯಲ್ಲಿ ಇವರ ಕವಿತೆಗೆ ಪ್ರಶಸ್ತಿ ಬಂದಿದೆ. ಇತ್ತೀಚೆಗೆ ಜನಮಿತ್ರ ಪತ್ರಿಕೆಯವರು ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಬಂದಿದೆ.

೧.ಇಳಿಸಂಜೆಯಲಿ ನೀಬಂದು ನಿಂತೆ.ಮನದಲಿ ಉಳಿದು ಬಿಟ್ಟೆ.ನಾ ಕರಗಿ ಹೋದೆ. ೨.ಒದ್ದೆ ಕೂದಲ ಕೊಡವಿಮುಂಗುರುಳ ಸರಿಸಿಆಗಷ್ಟೇ ಅರಳಿದಮಲ್ಲಿಗೆ ಮುಡಿಯೇರಿದೆಪರಿಮಳದ ಜೊತೆಗೆನಿನ್ನ ನೆನಪು…

ಇದೆಂಥ ವಿಚಿತ್ರ ಅಲ್ಲವೆ?ಆಟಗಾರರು ಇಬ್ಬರೇ… ಮಾತು ಮತ್ತು ಮೌನ…. ಮೌನ ಕೆಣಕುವ ಮಾತುಮಾತ ಹಿಂಡುವ ಮೌನನಡುವೆ ಸಾಗುವ ಪಂದ್ಯ….ಗೆಲುವ ಮಾನದಂಡವೇನು?ಸರಳ…

೧)ಕಟ್ಟಿ ಹಾಕಿದೆ ಮೆಲು ದನಿಯ ಹಾಡುಗಳು..ಎದೆಯೊಳಗೆ ಅಡಗಿಸಿ ಬಿಡಬೇಕು ಗುಟ್ಟುಗಳ… ***** ೨)ಖಾಲಿಯಾಗದ ಮುಗುಳ್ನಗೆಯಲೆಕ್ಕವಿಟ್ಟಿಲ್ಲ ನಾನು..ನೋವು ಮಡುಗಟ್ಟಿದಾಗ ಪ್ರತ್ಯಕ್ಷ ನೀನು……