ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಭಾ ಪುರೋಹಿತ್

ಬಿ ಎಸ್ಸಿ ಮತ್ತು ಎಮ್ ಎ ಓದಿರುವ ಇವರು ಕನ್ನಡ ಬೋಧಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡೂವರೆ ವರ್ಷ ಹಾಸನ ಆಕಾಶವಾಣಿ ಎಫ್ ಎಮ್ ಕೇಂದ್ರದಲ್ಲಿ ಉದ್ಘೋಷಕಿಯಾಗಿ, ಬೆಂಗಳೂರು ದೂರದರ್ಶನ ಚಂದನವಾಹಿನಿಯಲ್ಲಿ ವಾರ್ತಾವಾಚಕಿಯಾಗಿಯೂ ಕೆಲಸ ಮಾಡಿದ್ದಾರೆ. 'ಲೋಹಕಾರ್ಯ' ಎಂಬ ತಾಂತ್ರಿಕ ಮಾಸಿಕ ಪತ್ರಿಕೆಯ ಸಂಪಾದನೆಯ​ ಕಾರ್ಯವನ್ನೂ ಸಹ​ ನಿರ್ವಹಿಸಿದ್ದಾರೆ. ಕವನ ರಚನೆ ಮತ್ತು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವುದು ಇವರ ಮೆಚ್ಚಿನ ಹವ್ಯಾಸಗಳು. ಅದರ ಭಾಗವಾಗಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪಿ.ಹೆಚ್. ಡಿ ಪ್ರಬಂಧವನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೃತಿಗಳು : ಕವನ ಸಂಕಲನಗಳು ೧. ಮಲ್ಲಿಗೆ ಮತ್ತು ಇತರ ಕವಿತೆಗಳು ೨. ದೀಪಹಚ್ಚು ೩. ಕಲ್ಲೆದೆ ಬಿರಿದಾಗ ೪. ಬಾಲ್ಕನಿ ಕಂಡ ಕವಿತೆಗಳು ೫. ಜೀವನ ಯಾತ್ರೆ ( ಡಾ.ಯಶೋದಾ ಭಟ್ಟ ಅವರ ಜೀವನಚರಿತ್ರೆ) ಪ್ರಶಸ್ತಿಗಳು : - ೨೦೧೫ ರಲ್ಲಿ ಇವರ ಮೊದಲನೇ ಕವನಸಂಕಲನಕ್ಕೆ 'ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ' ಪಡೆದಿದ್ದಾರೆ. - ೨೦೧೯ರಲ್ಲಿ 'ಕಲ್ಲೆದೆ ಬಿರಿದಾಗ' ಕಾವ್ಯ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 'ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಪ್ರಶಸ್ತಿ' ದೊರಕಿದೆ. - ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ಸೇವಾರತ್ನ' ಪ್ರಶಸ್ತಿ ೨೦೨೦ರಲ್ಲಿ ಲಭಿಸಿದೆ ಹಾಗೂ 'ಬಾಲ್ಕನಿ ಕಂಡ ಕವಿತೆಗಳು' ಕವನಸಂಕಲನಕ್ಕೆ ಲೇಖಿಕಾ ಕಾವ್ಯ ಪ್ರಶಸ್ತಿ ಲಭಿಸಿದೆ. - ಧಾರವಾಡದ ೮೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನವಾಚನವನ್ನೂ ಮಾಡಿದ್ದಾರೆ.

ಅದೇ ಲಿಫ್ಟುಅದೇ ಟ್ರಾಫಿಕ್ಅದೇ ಯಂತ್ರಗಳಜಡೋಪಾಖ್ಯಾನ ಜಂಜಡದ ಬದುಕುಭಾವಜಡತೆಯ ಉದರದಲಿಕುಡಿಯೊಡೆಯುವದೇ ಅಪರೂಪಮೂಡಿದ್ದು ಫಲವಾಗುತಿಲ್ಲ ದಿನಗುರುಡೆಮಗೆಅದೆಷ್ಟೋ ಕವಿತೆಗಳನೊರೆ ತುಂಬುವುದುನೆರೆವುದೇಯಿಲ್ಲ !ತೊನೆತು ತನಿವುದೇಯಿಲ್ಲ! ಅಡರಿದ…