ಇತ್ತೀಚಿನ ಬರಹಗಳು: ರಕ್ಷಿತ ಜಿ ಎಂ (ಎಲ್ಲವನ್ನು ಓದಿ)
- ಕವಿಯಾಗಬಾರದಿತ್ತು ನಾನು - ಜುಲೈ 23, 2022
ಇಂದಿನ ಜೀವಂತ ಮಜಲುಗಳಿಗೆ
ನೆನ್ನೆಯ ಮುಸುಕು ಹೊದಿಸಿ
ನೆನಪುಗಳ ಪೋಣಿಸಿ
ಆಗುಹೋಗುವಿನ ಪ್ರಾಣಕ್ಕೆ
ಕನಸ ಕೊಡಬಾರದಿತ್ತು ನಾನು,
ಕವಿಯಾಗಬಾರದಿತ್ತು ನಾನು.
ಅಲ್ಲೆಲ್ಲೋ ಕುಸುಮವೊಂದು ಅರಳಲು
ಕಂಪನ್ನು ಇಲ್ಲಿ ಸವಿದು
ಗೋಡೆಗಳ ನಡುವೆ ಪದಗಳ ತುಂಬಿಸಿ
ಕಿಸೆಯಲಿದ್ದ ಬೀಗಕ್ಕೆ
ಕೀಲಿ ಕೊಡಬಾರದಿತ್ತು ನಾನು,
ಕವಿಯಾಗಬಾರದಿತ್ತು ನಾನು.
ದೂರದಲ್ಲಿನ ಚಂದ್ರನ ನೋಡಿ
ಹದಿನಾರು ಹರೆಯದ ಯೌವನಕ್ಕೆ
ಸಾಲು ಸಾಲು ಗಂಟುಗಳ ಬಿಡಿಸಿ
ಬೆಳದಿಂಗಳ ರಹಸ್ಯ ಹೇಳಿ
ಹೃದಯ ಕೆಡಿಸಬಾರದಿತ್ತು ನಾನು,
ಕವಿಯಾಗಬಾರದಿತ್ತು ನಾನು.
ಅವರಿವರ ವ್ಯಥೆಯ ನೋಡಲು
ಕತೆಯೊಂದನ್ನು ಹೆಣೆಯುತ್ತಾ
ಮುಖ ಪುಟಕ್ಕೂ ಹಿಂಬದಿಯ ತೋರಿಸಿ
ಮಂಜಿನ ಮುಖವಾಡ ಧರಿಸಿ
ಮೋಸ ಮಾಡಬಾರದಿತ್ತು ನಾನು,
ಕವಿಯಾಗಬಾರದಿತ್ತು ನಾನು.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ