ಇತ್ತೀಚಿನ ಬರಹಗಳು: ಡಾ. ಅಜಿತ್ ಹರಿಶಿ (ಎಲ್ಲವನ್ನು ಓದಿ)
- ನೂರು ನೂರು ತರಹ - ಏಪ್ರಿಲ್ 13, 2021
- ಅಜಿತ್ ಹರೀಶಿ - ಜೂನ್ 28, 2020
- ಮತ್ತೆ ಮಳೆ.. - ಜೂನ್ 6, 2020
ಹತ್ತಿರ ಬನ್ನಿ
ಕೈ ಮೇಲೆತ್ತಿ
ಇಷ್ಟು ಸಾಕಾ ?
ಟೈಟಾಗುತ್ತೇನೋ… ಸ್ವಲ್ಪ?
ಹೂಂ..
ತೀರಾ ಲೂಸಾಯ್ತಾ
ಇನ್ನೂ ಬೇಕಾ?
ಇತ್ತ ಜರುಗಿ
ಉಬ್ಬಿಸಿ ನಿಲ್ಲಿ
ಈ ಕಡೆ ತಿರುಗಿ
ಸೊಂಟ…
ಸಾಕಿಷ್ಟು
ಮೂವತ್ತೆರಡು, ನಾಲ್ಕು, ಆರು..
ಅಂಕೆ ಮೂಡಿಸಿದರು
ಅಳೆದು ಬೇಕಾದಂತೆ
ಕೇಳಿ ಕೇಳಿ ತಿಳಿದು…
ಕಳಿಸಿದರು ಬಾಗಿಲ ತೆರೆದು.
ನೀವು ಅಲ್ಲಿ ಮಲಗಿ
ಸಡಿಲಿಸಿ ಸ್ವಲ್ಪ…
ಹೊಕ್ಕಳ ಸುತ್ತ ಕೈಯಿಟ್ಟು ತಟ್ಟಿ
ಎದೆಯ ಬಡಿತ ಆಲಿಸಿ
ಕೈಗೆ ಬಿಗಿದು
ಪುಸು ಪುಸು ಒತ್ತಿ
ಹ್ಮಂ…
ಕಿವಿಯಿಂದ ಹೊರತೆಗೆದು
ಎದೆಯ ಮೇಲೆ ಇಳಿಬಿಟ್ಟು
ಗುಪ್ತಲಿಪಿಯಲಿ
ಅಕ್ಷರಗಳ ಗೀಚಿದರು
ಮತ್ತೆ ಬರಬೇಕು ಹಗಲು
ರಾತ್ರಿಯ ಚೀಟಿಯ ಹಿಡಿದು
ಮತ್ತದೇ ಬಾಗಿಲು ತಟ್ಟಲು
ಕೊನೆಗೆ
ಮುಚ್ಚಿದ ಬಾಗಿಲು ತೆರೆದರು..!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ