ಇತ್ತೀಚಿನ ಬರಹಗಳು: ದೀಪಕ್ ಜೋಶಿ (ಎಲ್ಲವನ್ನು ಓದಿ)
- ಜನರು ಸುಳ್ಳಾಡುತ್ತಾರೆ - ನವೆಂಬರ್ 21, 2020
ಅಂದು ಸೂರ್ಯಗ್ರಹಣ
ಮೇಲೆ ಬಿಸಿಲು ರಣರಣ
ಮಧ್ಯಾಹ್ನದ ಮಂಪರಿನ ನಿದ್ದೆ
ಕೆಟ್ಟ ಕೂಗೊಂದು ಕೇಳಿ ಎದ್ದೆ
ಅಂಗಳದಲ್ಲಿದ್ದ ಆಕೆಗೆ ದಾನಿಗಳ ನಿರೀಕ್ಷೆ
ನೀಡಲೊಲ್ಲರಾರೂ ಗ್ರಹಣಮೋಕ್ಷದ ಭಿಕ್ಷೆ
ಛಲಬಿಡದವಳ ಕೂಗು ಹಿಡಿ ಅನ್ನಕ್ಕಾಗಿ
ಕರುಳಲ್ಲೊಂದು ಚೀಲ, ಅದರಲ್ಲಿಯ ಕೂಸಿಗಾಗಿ
ಕೂಗಲ್ಲ ಅದು ಭಯಂಕರ ಆರ್ತನಾದ
ಇದರ ಗುರು ತಾನೆಂದು ಹಸಿವಿನ ವಾದ
ತಾರಕಕ್ಕೇರಿತು ಧ್ವನಿ, ಕೃಷವಾದರೂ ದೇಹ
ಆಗಲೇ ಹುಟ್ಟಿತೊಂದು ಎನಗೆ ಸಂದೇಹ
“ಜನರು ಸುಳ್ಳಾಡುತ್ತಾರೆ
ಬಡತನಕ್ಕಿಲ್ಲ ಧ್ವನಿ ಎಂದು”
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ