ಇತ್ತೀಚಿನ ಬರಹಗಳು: ರೇಶ್ಮಾ ಗುಳೇದಗುಡ್ಡಾಕರ್ (ಎಲ್ಲವನ್ನು ಓದಿ)
- ಮುಗಿಲ ಮಳೆ …. - ಏಪ್ರಿಲ್ 18, 2021
- ಡಾರ್ಕ್ ಮೋಡ್ - ಏಪ್ರಿಲ್ 4, 2021
- ಸಾಗರದೊಳಗಿನ ಮೌನ - ಅಕ್ಟೋಬರ್ 24, 2020
ಬಿಸಿಯುಸಿರ ಮೊರೆತ
ಎದೆಯಂಗಳ ತುಂಬಿ
ಹರಿದ ದೃಗಜಲವು
ಮಳೆಹನಿಯನ್ನು ನಾಚಿಸಿದವು
ಮಾತು ಭರ್ಜಿಗಿಂತಲೂ ಹರಿತವಾಗಿ
ಭಾವನೆಗಳ ಛಿದ್ರಗೂಳಿಸಿ
ಯಾವ ಹತಾರಕ್ಕೂ ಕಡಿಮೆ ಇಲ್ಲ ಎಂದವು
ಹೆಣ್ಣೆಂಬ ಕಾರಣಕ್ಕೆ …!
ಕಾವಲಾಗಬೇಕಾಗಿದ್ದು ಎದ್ದು
ಧ್ವಂಸ ಮಾಡಿತು ಸದ್ದಿಲ್ಲದೆ ತಾನು
ಬಣ್ಣದ ತೆರೆ ಎಳೆದು ನೇಪಥ್ಯಕ್ಕೆ ಸರಿಯಿತು
ಹಸಿದ ಒಡಲಿಗಿಂತ ದೇಹದ
ಹಸಿವು ಅಬ್ಬರಿಸುತ್ತಿದೆ
ತಾಯಿ ನೀಡಿದ ಎದೆಹಾಲನು ಮರೆತು
ಅಟ್ಟಹಾಸವ ಮೆರೆಯುತಿದೆ
ಬಯಕೆಯು ಬೇಲಿಯಾಗಿ
ಹೃದಯವ ದಹಿಸುತಿದೆ ಬರಸೆಳೆದು
ಕಗ್ಗತ್ತಲಿಗೆ ನೂಕುತಿದೆ
ಹೆಣಗಳಾಗಿ ಮೆರವಣಿಗೆ ಹೊರಟ
ಕನಸುಗಳು ತಣ್ಣಗೆ ಸೇರುತಿಹವು
ನಿರಾಸೆಯ ವನಧಿಯ
ಅಸಹನೆಯ ಅಲೆಗೆ
ಸವೆದು ಸವೆದು ಲೀನವಾಯಿತು
ದಿನಾಚರಣೆಗಳು ಅಧುನಿಕತೆಯ
ಭಾಗವಾಗಿ ಪ್ರತಿಮೆ ಮಾಡಿದವು
ಹೆಣ್ಣು ಕುಲವನ್ನು
ನಿತ್ಯದ ಬಾಳು ತಪವಿಲ್ಲ
ಪಡೆದ ಗೋಳು ಹಿಂಸೆಯ ಅವುಗೆಯ
ಕಿಚ್ಚಿಗೆ ಒರುವಲಾಗಿ ಬೇಯುತಿಹಳು
ಏಕೆಂದರೆ ಅವಳು ನಾರಿ,ನಾರಿ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ